ನವದೆಹಲಿ, ಅ.29 (DaijiworldNews/PY): ಕೊರೊನಾ ಹಿನ್ನೆಲೆ 150ಕ್ಕೂ ಅಧಿಕ ದೇಶಗಳಿಗೆ ಭಾರವು ವೈದ್ಯಕೀಯ ಸೇರಿದಂತೆ ಇತರೆ ನೆರವು ನೀಡಿದೆ ಎಂದು ಜುಲೈ ಮಧ್ಯದಲ್ಲಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಆದರೆ, ಆರ್ಟಿಐ ಪ್ರಕ್ರಿಯೆಯು, ಆಗಸ್ಟ್ ಮೊದಲ ವಾರದಂತೆ ಭಾರತವು 81 ದೇಶಗಳಿಗೆ 97.73 ಕೋಟಿ ರೂ. ಮಾತ್ರ ನೆರವು ನೀಡಿದೆ ಎಂದು ತಿಳಿಸಿದೆ.
ಆಗಸ್ಟ್ 5ರವರೆಗಿನ ಮಾಹಿತಿಯ ಪ್ರಕಾರ, ಭಾರತದಿಂದ ಚೀನಾವು 1.87 ಕೋಟಿ.ರೂ ಮೊತ್ತದ ನೆರವು ಪಡೆದುಕೊಂಡಿದ ಎಂದು ಆರ್ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಎಂಬವರಿಗಸ ವಿದೇಶಾಂಗ ಇಲಾಖೆಯು ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ.
1.87 ಕೋಟಿ.ರೂ ಮೊತ್ತದ ಈ ನೆರವಿನ ಸಾರಿಗೆಯ ವೆಚ್ಚವಾಗಿ ಭಾರತ 4.24 ಕೋಟಿ. ರೂ.ಅನ್ನು ವ್ಯಯಿಸಿದೆ ಎಂದು ಕೇಂದ್ರ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ಮಾಹಿತಿ ಕೋರಿ ವೆಂಕಟೇಶ್ ಅವರು ಮೇ ತಿಂಗಳಲ್ಲಿನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಗೆ ಸೆಪ್ಟೆಂಬರ್ನಲ್ಲಿ ಪ್ರತಿಕ್ರಿಯೆ ದೊರೆತಿದೆ.
ಮಾರ್ಚ್ 18ರಂದು ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ ಮುರಳೀಧರನ್ ಅವರು ಕೇಂದ್ರ ಸರ್ಕಾರ ನೀಡಿರುವ ಈ ಮಾಹಿತಿಯನ್ನು ಲೋಕಸಭೆಯಲ್ಲಿ ಮಂಡಿಸಿದ್ದು, ಚೀನಾಕ್ಕೆ 2.11 ಕೋಟಿ.ರೂ ಮೊತ್ತದ ವೈದ್ಯಕೀಯ ನೆರವು ನೀಡಿರುವುದಾಗಿ ತಿಳಿಸಿದ್ದರು.
ಫೆಬ್ರವರಿ 26 ರಂದು ಭಾರತ ಸರ್ಕಾರವು ಒಂದು ಲಕ್ಷ ಸರ್ಜಿಕಲ್ ಮಾಸ್ಕ್, ಐದು ಲಕ್ಷ ಗ್ಲೌಸ್, 75 ಇನ್ಫ್ಯೂಷನ್ ಪಂಪ್ಗಳು, 30 ಎಂಟರಲ್ ಫೀಡಿಂಗ್ ಪಂಪ್ಗಳು, 21 ಡಿಫಿಬ್ರಿಲೇಟರ್ಗಳು ಹಾಗೂ 2.11 ಕೋಟಿ ರೂ.ಗಳ 4,000 ಎನ್ -95 ಮುಖವಾಡಗಳನ್ನು ಒಳಗೊಂಡ 15 ಟನ್ ವೈದ್ಯಕೀಯ ಸಹಾಯವನ್ನು ಒದಗಿಸಿದೆ. ವುಹಾನ್ನಲ್ಲಿ ಬಂದಿಳಿದ ಭಾರತೀಯ ವಾಯುಪಡೆಯ ಸಿ -17 ವಿಶೇಷ ವಿಮಾನ ಈ ನೆರವು ನೀಡಿತು ಎಂದು ಮಾಹಿತಿ ನೀಡಿದ್ದರು.
ಜು.17ರಂದು ನಡೆದ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಅಧಿವೇಶನದ ಉನ್ನತ ಮಟ್ಟದ ಸಮಾರಂಭದ ಸಂದರ್ಭ ಪ್ರಧಾನಿ ಮೋದಿ ಅವರು ಮಾಡಿರುವ ಭಾಷಣಕ್ಕೂ ಹಾಗೂ ಆರ್ಟಿಐ ಪ್ರತಿಕ್ರಿಯೆ ಭಿನ್ನವಾಗಿದೆ.
ಕೊರೊನಾ ಹಿನ್ನೆಲೆ ಭಾರತವು 150 ದೇಶಗಳಿಗೆ ನೆರವು ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ವಿದೇಶಾಂಗ ನೀಡಿದ ಇತ್ತೀಚಿನ ಮಾಹಿತಿ ಪ್ರಕಾರ 81 ದೇಶಗಳಿಗೆ ಮಾತ್ರವೇ ನೆರವು ನೀಡಿದೆ ಎಂದು ತಿಳಿಸಿದೆ. ಆದರೆ, ಕೊರೊನಾ ಹೋರಾಟದಲ್ಲಿ ಭಾರತವು ವೈದ್ಯಕೀಯ ಹಾಗೂ ಇತರೆ ನೆರವುಗಳನ್ನು ಪೂರೈಸಿದ ಇತರೆ 70 ದೇಶಗಳು ಯಾವುವು ಎಂಬುದು ನಮಗೆ ತಿಳಿದಿಲ್ಲ ಎಂದು ಆರ್ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.