ಬೆಂಗಳೂರು,ಅ. 29 (DaijiworldNews/HR): ರೈಸ್ ಸ್ಟೀಮ್ ಕುಕ್ಕರ್ ಸ್ಫೋಟಗೊಂಡ ಪರಿಣಾಮ ಹೊಟೇಲ್ ನ ವಲಸೆ ಕಾರ್ಮಿಕನೋರ್ವ ಸಾವನ್ನಪ್ಪಿದ್ದು, ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಹೋಟೆಲೊಂದರಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಮೃತಪಟ್ಟಿರುವ ನೌಕರನನ್ನು ಅಸ್ಸಾಂ ಮೂಲದ ಮನೋಜ್ ಅಲಿಯಾಸ್ ಶಿವ ಎಂದು ಗುರುತಿಸಲಾಗಿದ್ದು, ಗಾಯಗೊಂಡಿರುವ ನೌಕರರನ್ನು ಪ್ರದೀಪ್, ಮೋಹನ್ ಮತ್ತು ನವೀನ್ ಎಂದು ಗುರುತಿಸಲಾಗಿದೆ.
ಇನ್ನು ರಿಚ್ಮಂಡ್ ವೃತ್ತದಲ್ಲಿರುವ ನ್ಯೂ ಉಡುಪಿ ಉಪಾಹಾರ್ ಹೊಟೆಲ್ ನಲ್ಲಿ ಬುಧವಾರ ರಾತ್ರಿ ಸುಮಾರು 8.15ರ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ರಾತ್ರಿ ಊಟಕ್ಕಾಗಿ ಕಾರ್ಮಿಕರು ಅನ್ನ ಮಾಡುತ್ತಿದ್ದರು. ಈ ವೇಳೆ ಅನ್ನ ಮಾಡುವ ಸ್ಟೀಮರ್ ಆಕಸ್ಮಿಕವಾಗಿ ಸ್ಪೋಟಗೊಂಡಿದೆ. ಕೂಡವೇ 2 ಅಗ್ನಿಶಾಮಕ ವಾಹನ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿತು.
ಈ ಬಗ್ಗೆ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.