ಪಾಟ್ನಾ, ಅ. 29 (DaijiworldNews/MB) : ಬಿಹಾರದಲ್ಲಿ ಎರಡನೇ ಸುತ್ತಿನ ಪ್ರಚಾರದ ವೇಳೆ ಬಿಹಾರ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರನ್ನು ಜಂಗಲ್ ರಾಜ್ ಕ ಯುವರಾಜ್ ಎಂದಿದ್ದ ಮೋದಿಯವರಿಗೆ ತೇಜಸ್ವಿ ಯಾದವ್ ತಿರುಗೇಟು ನೀಡಿ, ''30 ಹೆಲಿಕಾಪ್ಟರ್ ಬಳಸುವ ಪಕ್ಷದ ಪ್ರಧಾನಿ ಹೀಗೆ ಮಾತನಾಡಿದರೆ ಮುಂದಿನದ್ದು ಜನರು ತೀರ್ಮಾನಿಸುತ್ತಾರೆ'' ಎಂದು ಟಾಂಗ್ ನೀಡಿದ್ದಾರೆ.
''ದೇಶದ ಪ್ರಧಾನ ಮಂತ್ರಿಯಾಗಿರುವ ಅವರು ಏನು ಬೇಕಾದರೂ ಹೇಳಬಹುದು ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ ಅವರು ಬಿಹಾರಕ್ಕೆ ಬಂದು ಚುನಾವಣೆ ಭಾಷಣದಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ, ನಿರುದ್ಯೋಗ ಸಮಸ್ಯೆ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಅನಗತ್ಯ ವಿಚಾರವನ್ನೇ ಮಾತನಾಡಿ ಹೋಗಿದ್ದಾರೆ'' ಎಂದಿದ್ದಾರೆ.
''ಪ್ರಧಾನಿಯವರು ಅನಗತ್ಯ ವಿಚಾರಗಳೇ ಮಾತಾನಾಡುವ ಬದಲು ಬಡತನ, ನಿರುದ್ಯೋಗ ಸಮಸ್ಯೆ, ರೈತರು, ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ಮಾತನಾಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ತೇಜಸ್ವಿ ಯಾದವ್, ದೊಡ್ಡ ಪಕ್ಷವಾದ ಬಿಜೆಪಿಯವರಾದ ಪ್ರಧಾನಿಯ ಅನಗತ್ಯ ಮಾತುಗಳನ್ನು ಕೇಳಿದ ಜನರೇ ಭವಿಷ್ಯವನ್ನು ನಿರ್ಧಾರಿಸುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ಸೋಲು ಕಟ್ಟಿಟ್ಟ ಬುತ್ತಿ'' ಎಂದು ಹೇಳಿದರು.