ಚೆನ್ನೈ,ಅ. 20 (DaijiworldNews/HR): ತಮಿಳು ನಟ ವಿಜಯ ಸೇತುಪತಿ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಜೀವನಾಧರಿತ ಚಿತ್ರ ದಿಂದ ಹೊರ ಬಂದಿದ್ದು, ಇದೇ ವಿಚಾರವಾಗಿ ಸೇತುಪತಿಗೆ ಅನೇಕರು ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ.
ವಿಜಯ ಸೇತುಪತಿ ಮುರಳೀಧರನ್ ಜೀವನಚರಿತ್ರೆವುಳ್ಳ ಚಿತ್ರದಿಂದ ಹೊರ ಬಂದ ಕೆಲವೇ ಗಂಟೆಗಳ ಬಳಿಕ ನಟನ ಟೈಮ್ಲೈನ್ನಲ್ಲಿ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ.
ಇನ್ನು ಸೇತುಪತಿ ಮಗಳಿಗೆ ಬೆದರಿಕೆ ಹಾಕಿರುವ ಟ್ರೋಲ್ಗಳು ಟ್ವಿಟರ್ನಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಇಂತಹ ವರ್ತನೆಯನ್ನು ಖಂಡಿಸಿದ್ದಾರೆ.
ಈ ಬೆದರಿಕೆಯನ್ನು ಖಂಡಿಸಿದ್ದ ಗಾಯಕ ಚಿನ್ಮಯ್ ಶ್ರೀಪಾದ ಅವರು ಚೆನ್ನೈ ಪೊಲೀಸ್ ಹಾಗೂ ಅಡ್ಯಾರ್ ಪೊಲೀಸ್ ಆಯುಕ್ತರಿಗೆ ಈ ಟ್ವೀಟನ್ನು ಟ್ಯಾಗ್ ಮಾಡಿದ್ದಾರೆ.