ಬೆಂಗಳೂರು,ಸೆ. 22(DaijiworldNews/HR): ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಆರೋಪದಡಿ ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಟ್ ಅವರನ್ನು ಆಂತರಿಕ ಭದ್ರತಾ ವಿಭಾಗದ (ಐಎಸ್ಡಿ) ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಐಎಸ್ಡಿ ಪೊಲೀಸರು ಇಬ್ಬರು ಪೆಡ್ಲರ್ಗಳನ್ನು ಇತ್ತೀಚೆಗಷ್ಟೇ ಬಂಧಿಸಿದ್ದು, ಅವರ ಹೇಳಿಕೆ ಆಧರಿಸಿ ನಟ ಯೋಗೀಶ್ ಹಾಗೂ ಕ್ರಿಕೆಟಿಗ ಎನ್.ಸಿ.ಅಯ್ಯಪ್ಪ ಅವರನ್ನು ಈಗಾಗಲೇ ವಿಚಾರಣೆ ನಡೆಸಿದ್ದಾರೆ.
ಇದೀಗ ಗಟ್ಟಿಮೇಳ ಖ್ಯಾತಿಯ ಅಭಿಷೇಕ್ ಹಾಗೂ ಬ್ರಹ್ಮಗಂಟು ಖ್ಯಾತಿಯ ಗೀತಾ ಭಟ್ ಅವರಿಗೂ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದರು.
ಇಬ್ಬರೂ ಶಾಂತಿನಗರದಲ್ಲಿರುವ ಐಎಸ್ಡಿ ಕಚೇರಿಗೆ ವಿಚಾರಣೆಗಾಗಿ ಬಂದಿದ್ದು, ಎಸ್ಪಿ ನೇತೃತ್ವದ ತಂಡ, ಅವರ ಹೇಳಿಕೆ ಪಡೆಯುತ್ತಿದೆ.