ನವದೆಹಲಿ, ಸೆ.10(DaijiworldNews/HR): ಫ್ರಾನ್ಸ್ ನಲ್ಲಿ ತಯಾರಾಗಿ ಜುಲೈನಲ್ಲಿ ಭಾರತಕ್ಕೆ ಬಂದ ಐದು ರಫೇಲ್ ಯುದ್ಧ ವಿಮಾನಗಳನ್ನು ಅಧಿಕೃತವಾಗಿ ವಾಯುಪಡೆಗೆ ಇಂದು ಸೇರ್ಪಡೆಗೊಳ್ಳಲಿದ್ದು, ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಈ ಕಾರ್ಯಕ್ರಮಕ್ಕಾಗಿ ನವದೆಹಲಿಗೆ ಆಗಮಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ಭಾರತದ ಉನ್ನತ ಮಿಲಿಟರಿ ಅಧಿಕಾರಿಗಳು ಅಂಬಾಲಾ ವಾಯುನೆಲೆಯಲ್ಲಿ ಐದು ರಫೇಲ್ ಫೈಟರ್ ಜೆಟ್ಗಳನ್ನು ಭಾರತೀಯ ವಾಯುಪಡೆಗೆ ಸೇರಿಸಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂಬಾಲ ವಾಯುನೆಲೆಯಲ್ಲಿ ರಫೇಲ್ ವಾಯುಪಡೆ ಸೇರ್ಪಡೆ ಕಾರ್ಯಕ್ರಮದಲ್ಲಿ ಸರ್ವಧರ್ಮ ಪೂಜೆಯನ್ನು ಮಾಡಲಾಗುತ್ತದೆ. ಫ್ರಾನ್ಸ್ ಅಧಿಕಾರಿಗಳ ಜೊತೆ ಬಂದಿರುವ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ವಾಯುನೆಲೆಗೆ ಬರುತ್ತಿದ್ದಂತೆ ಗೌರವ ವಂದನೆ ಸಲ್ಲಿಸಲಾಗುತ್ತದೆ.
ಇನ್ನು ಫ್ರಾನ್ಸ್ ನಿಂದ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನು ಭಾರತ ಖರೀದಿಸಲಿದ್ದು, ಈಗಾಗಲೇ ಐದು ರಫೇಲ್ ಯುದ್ಧ ವಿಮಾನಗಳು ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಇಂದು ಅಧಿಕೃತವಾಗಿ ವಾಯುಪಡೆಗೆ ಸೇರ್ಪಡೆಯಾಗಲಿವೆ.