ಅಗರ್ತಲಾ, ಆ 29(DaijiworldNews/HR): ತ್ರಿಪುರದ ಮಹಿಳೆಯೊಬ್ಬಳು ತನ್ನ ಗಂಡನನ್ನು ಕೊಂದು, ಶವವನ್ನು ಅವರ ಮಲಗುವ ಕೋಣೆಯಲ್ಲಿ ಸಮಾಧಿ ಮಾಡಿ ಪೊಲೀಸರಿಗೆ ಶರಣಾದ ಘಟನೆ ಅಗರ್ತಲಾದ ಧಲೈ ಜಿಲ್ಲೆಯ ಗಂಡಚೆರಾ ಹಳ್ಳಿಯಲ್ಲಿ ನಡೆದಿದೆ.
ಸಂಜಿತ್ ರಿಯಾಂಗ್ (30) ಹತ್ಯೆಯಾದ ವ್ಯಕ್ತಿಯಾಗಿದ್ದು, ಶವವನ್ನು ಪೊಲೀಸರು ಪೋಸ್ಟ್ ಮಾರ್ಟಂಗೆ ರವಾನಿಸಿದ್ದಾರೆ.
ಆರೋಪಿ ಭಾರತಿ ರೇಂಗ್ (25) ತನ್ನ ಗಂಡನನ್ನು ಹತ್ಯೆಗೈದು ಬೆಡ್ ರೂಂ ನಲ್ಲಿ ಸಮಾಧಿ ಮಾಡಿ ಆ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.
ಪೊಲೀಸರ ತನಿಖೆಯಿಂದ ಮೃತಪಟ್ಟ ವ್ಯಕ್ತಿಯ ತಲೆಗೆ ಭಾರವಾದ ವಸ್ತುವಿನಿಂದ ಹೊಡೆಯಲಾಗಿದೆ ಎಂದು ತಿಳಿದುಬಂದಿದ್ದು ಶವಪರೀಕ್ಷೆ ವರದಿ ಇನ್ನಷ್ಟೆ ಬರಬೇಕಾಗಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ, ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.