ನವದೆಹಲಿ, ಜೂ 26(DaijiworldNews/PY) : ನಾನು ಇಂದಿರಾ ಗಾಂಧಿ ಅವರ ಮೊಮ್ಮಗಳು, ಕೆಲವು ವಿರೋಧ ಪಕ್ಷದ ನಾಯಕರಂತೆ ಅಘೋಷಿತ ಬಿಜೆಪಿ ವಕ್ತಾರನಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಶುಕ್ರವಾರ ಹೇಳಿದ್ದಾರೆ. ಸತ್ಯವಾದ ವಿಚಾರಗಳನ್ನು ಹೇಳಿದರೆ, ಯುಪಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಬೆದರಿಕೆ ಹಾಕುತ್ತಿದೆ ಎಂದು ಯುಪಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.
ಜಿಲ್ಲೆಯಲ್ಲಿ ಹೆಚ್ಚು ಕೊರೊನಾ ಸಾವು ಸಂಭವಿಸಿದೆ ಎನ್ನುವ ಆರೋಪವನ್ನು 24 ಗಂಟೆಗಳ ಒಳಗೆ ಹಿಂತೆಗೆದುಕೊಳ್ಳುವಂತೆ ಆಗ್ರಾ ಆಡಳಿತವು ಕೇಳಿದ ಕೆಲ ದಿನಗಳ ನಂತರ ಈ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.
ಜನರ ಸೇವಕನಾಗಿ, ನನ್ನ ಕರ್ತವ್ಯವನ್ನು ಮಾಡುತ್ತಿದ್ದೇನೆ. ಯುಪಿ ಸರ್ಕಾರವು ತನ್ನ ವಿವಿಧ ಇಲಾಖೆಗಳ ಮೂಲಕ ನನಗೆ ಬೆದರಿಕೆ ಹಾಕುವ ಮೂಲಕ ಸಮಯವನ್ನು ವ್ಯರ್ಥ ಮಾಡುತ್ತಿದೆ. ನಾನು ಸತ್ಯವನ್ನು ಮುಂದಿಡುತ್ತೇನೆ. ನಾನು ಇಂದಿರಾ ಗಾಂಧಿಯವರ ಮೊಮ್ಮಗಳು ಕೆಲವು ವಿರೋಧ ಪಕ್ಷದ ನಾಯಕರಂತೆ ಅಘೋಷಿತ ಬಿಜೆಪಿ ವಕ್ತಾರನಲ್ಲ ಎಂದು ಪ್ರಿಯಾಂಕ ಗಾಂಧಿ ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.