ನವದೆಹಲಿ, ಜೂ.21 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲಿದ್ದು ಕಳೆದ ಒಂದು ದಿನದಲ್ಲಿ ದೇಶದಲ್ಲಿ 15,413 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು 306 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯು ನಾಲ್ಕು ಲಕ್ಷದ ಗಡಿ ದಾಟಿದ್ದು 410461 ಮಂದಿಗೆ ಸೋಂಕು ತಗುಲಿದೆ. 13254 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ಇನ್ನು ಜೂ.1ರಿಂದ ಜೂ.20ರ ಅವಧಿಯಲ್ಲಿ 2,04,513 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಹಾಗೆಯೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ನಡುವೆಯೇ ಒಟ್ಟು 2,27,756 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು 169451 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ 128205 ಜನರಿಗೆ ಸೋಂಕು ತಗುಲಿದ್ದು 5984 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 64153 ಮಂದಿ ಗುಣಮುಖರಾಗಿದ್ದು 58068 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 8697 ಮಂದಿಗೆ ಸೋಂಕು ದೃಢಪಟ್ಟಿದ್ದು 132 ಮಂದಿ ಸಾವನ್ನಪ್ಪಿದ್ದಾರೆ. 3174 ಸಕ್ರಿಯ ಪ್ರಕರಣಗಳಾಗಿದ್ದು 5391 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 56845, ದೆಹಲಿಯಲ್ಲಿ 56746, ಗುಜರಾತ್ನಲ್ಲಿ 26680 , ಉತ್ತರ ಪ್ರದೇಶದಲ್ಲಿ 16594, ರಾಜಸ್ತಾನದಲ್ಲಿ 14536, ಮಧ್ಯಪ್ರದೇಶದಲ್ಲಿ 11724, ಪಶ್ಚಿಮ ಬಂಗಾಳದಲ್ಲಿ 13531 ಕೊರೊನಾ ಪ್ರಕರಣಗಳು ದಾಖಲಾಗಿದೆ.