ನವದೆಹಲಿ, ಜೂ.17 (DaijiworldNews/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆಯೇ ಕೊರೊನಾಗೆ ಬಲಿಯಾದವರ ಸಂಖ್ಯೆಯೂ ಏರಿಕೆಯಾಗುತ್ತಿದ್ದು ಕಳೆದ ಒಂದು ದಿನದಲ್ಲೇ 2,003 ಮಂದಿ ಕೊರೊನಾಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 11,903 ಕ್ಕೆ ಏರಿಕೆ ಏರಿಕೆಯಾಗಿದೆ.
ದೇಶದಲ್ಲಿ ಒಂದು ದಿನದಲ್ಲಿ 10,974 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು 3,54,065 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಕೊರೊನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಲ್ಲಿದ್ದು 1,55,227 ಪ್ರಕರಣಗಳು ಸಕ್ರಿಯವಾಗಿದ್ದು, 1,86,935 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ದೇಶದಲ್ಲೇ ಅಧಿಕ ಕೊರೊನಾ ಸೋಂಕು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 1,13,445 ಜನರಿಗೆ ಸೋಂಕು ತಗುಲಿದ್ದು 5,537 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 57,851 ಮಂದಿ ಗುಣಮುಖರಾಗಿದ್ದು 50,057 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 7530 ಮಂದಿಗೆ ಸೋಂಕು ದೃಢಪಟ್ಟಿದ್ದು 94 ಮಂದಿ ಸಾವನ್ನಪ್ಪಿದ್ದಾರೆ. 2980 ಸಕ್ರಿಯ ಪ್ರಕರಣಗಳಾಗಿದ್ದು 4456 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 528, ದೆಹಲಿಯಲ್ಲಿ 1837, ಗುಜರಾತ್ನಲ್ಲಿ 1533, ಉತ್ತರ ಪ್ರದೇಶದಲ್ಲಿ 417, ರಾಜಸ್ತಾನದಲ್ಲಿ 308, ಮಧ್ಯಪ್ರದೇಶದಲ್ಲಿ 476, ಪಶ್ಚಿಮ ಬಂಗಾಳದಲ್ಲಿ 495 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.