ನವದೆಹಲಿ, ಜೂ.17 (DaijiworldNews/MB) : ಸತತ 11ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು ಗ್ರಾಹಕರು ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಪೆಟ್ರೋಲ್ ದರ ಲೀಟರ್ಗೆ 55 ಪೈಸೆ ಹಾಗೂ ಡೀಸೆಲ್ ದರ ಲೀಟರ್ಗೆ 69 ಪೈಸೆ ಏರಿಕೆಯಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ.77.28 ಹಾಗೂ ಪ್ರತೀ ಲೀಟರ್ ಡೀಸೆಲ್ ದರ ರೂ.75.79 ಕ್ಕೆ ಏರಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 79.79 ಹಾಗೂ ಪ್ರತೀ ಲೀಟರ್ ಡೀಸೆಲ್ ದರ 72.07 ಆಗಿದೆ.
ಸತತ 11 ದಿನಗಳಿಂದಲೂ ತೈಲ ಬೆಲೆ ಏರಿಕೆಯಾಗಿದ್ದು ಒಟ್ಟು 11 ದಿನದಲ್ಲಿ ಪೆಟ್ರೋಲ್ ರೂ.6.2 ಹಾಗೂ ಡೀಸೆಲ್ ದರ ರೂ.6.49 ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಒಂದು ರೂಪಾಯಿ ಏರಿಕೆಯಾದರೂ ಕೊರೊನಾ ಸಂಕಷ್ಟದಲ್ಲಿರುವ ನಮಗದು ಹೊರೆಯೇ ಆಗಿದೆ. ಕೊರೊನಾ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂಬುದು ಗ್ರಾಹಕರ ಮಾತಾಗಿದೆ.