ನವದೆಹಲಿ, ಜೂ.16 (DaijiworldNews/MB) : ಲಡಾಖ್ ಗಡಿಯಲ್ಲಿ ಚೀನಾ ಭಾರತ ಯೋಧರ ನಡುವೆ ಘರ್ಷಣೆ ನಡೆದು ಭಾರತೀಯ ಯೋಧರನ್ನು ಹತ್ಯೆ ಮಾಡಲಾಗಿರುವ ಬಗ್ಗೆ ಕಾಂಗ್ರೆಸ್ ಆಘಾತ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ಚೀನಾದ ದಾಳಿಗೆ ಭಾರತೀಯ ಯೋಧರು ಹತರಾಗಿರುವುದು ಆಘಾತಕಾರಿ, ನಂಬಲಾಗದು, ಸಹಿಸಲಾಗದು. ಈ ಬಗ್ಗೆ ರಕ್ಷಣಾ ಸಚಿವರು ಖಚಿತಪಡಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಲಡಾಖ್ನ ಪೂರ್ವಭಾಗದ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ ಭಾರತ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈ ಸಂದರ್ಭದಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮರಾಗಿದೆ. ಚೀನಾದ ಸೇನೆಗೂ ಹಾನಿಯಾಗಿದೆ ಎಂದು ಹೇಳಲಾಗಿದೆ.