ಬೆಂಗಳೂರು, ಜೂ.16 (DaijiworldNews/MB) : "ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿ ಮಾಡುವ ಅವಶ್ಯಕತೆಯಿಲ್ಲ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಈ ಬಗ್ಗೆ ಮಂಗಳವಾರ ವರದಿಗಾರರಲ್ಲಿ ಮಾತನಾಡಿದ ಅವರು, "ಜನರು ಈಗ ಸಹಜವಾದ ಜೀವನ ನಡೆಸಲು ಅವಕಾಶ ನೀಡಲಬೇಕಾಗಿದ್ದು ಪ್ರಧಾನಿ ನರೇಂದ್ರ ಮೋದಿ ಬಳಿ ಈ ಸಂವಾದ ನಡೆಸುವಾಗ ಇನ್ನಷ್ಟು ವಲಯಗಳ ವಿನಾಯಿತಿಗೆ ಮನವಿ ಮಾಡುತ್ತೇನೆ" ಎಂದು ತಿಳಿಸಿದರು.
ಭಾನುವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಿ, "ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದರು. ಹಾಗೆಯೇ ಸಿಎಂ ಬಿಎಸ್ವೈ ಅವರ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್, ''ರಾಜ್ಯ ಸರ್ಕಾರವು ಲಾಕ್ಡೌನ್ ಮಾಡಲು ಚಿಂತನೆ ನಡೆಸಿಲ್ಲ'' ಎಂದು ಹೇಳಿದ್ದರು.