ನವದೆಹಲಿ, ಜೂ.10 (DaijiworldNews/MB) : ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭೂಕಂಪವಾಗಿದ್ದು ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
4.3ರಷ್ಟು ತೀವ್ರತೆಯ ಈ ಭೂಕಂಪವು ಬುಧವಾರ ಬೆಳಗ್ಗೆ 2.17ರ ಸುಮಾರಿಗೆ ಭೂಕಂಪ ಸಂಭವಿಸಿದ್ದು ಇಲ್ಲಿನ ದಿಗ್ಲಿಪುರ್ದಲ್ಲಿ ಭೂಕಂಪ ಕೇಂದ್ರ ಬಿಂದುವಿತ್ತು ಎಂದು ರಾಷ್ಟ್ರೀಯ ಭೂಕಂಪನ ಸಂಸ್ಥೆ ತಿಳಿಸಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಹವಮಾನ ಇಲಾಖೆಯ ಅಧಿಕಾರಿಗಳು, ಇದು ಸಣ್ಣ ಪ್ರಮಾಣದ ಭೂಕಂಪವಾಗಿದ್ದು. ಈಗ ಯಾವುದೇ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.