ನವದೆಹಲಿ, ಜೂ.10 (DaijiworldNews/MB) : ಪೂರ್ವ ಲಡಾಖ್ನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಮೂರು ಸ್ಥಳಗಳಿಂದ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಭಾರತ ಹಾಗೂ ಚೀನಾ ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಗಸ್ತು ಠಾಣೆ 14, 15 ಮತ್ತು 17ಎ ಬಳಿಯಲ್ಲಿ ಬೀಡುಬಿಟ್ಟಿದ್ದ ಚೀನಾ ಯೋಧರನ್ನು ಚೀನಾವು ಸೈನಿಕರು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಗಡಿಯಿಂದ 2.5 ಕಿ.ಮೀ. ಹಿಂದಕ್ಕೆ ಕರೆಸಿಕೊಂಡಿದ್ದು ಭಾರತ ಹಾಗೂ ಚೀನಾ ತಮ್ಮ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಕೊನೆಯಾಗಲು ಇನ್ನೂ ಹತ್ತು ದಿನಗಳು ಬೇಕಾಗಬಹುದು ಎಂದು ಹೇಳಲಾಗಿದೆ.
ಇನ್ನು ಪಾಂಗಾಂಗ್ ತ್ಸೊ ಸರೋವರದ ಉತ್ತರ ದಂಡೆಯಲ್ಲಿ ಎರಡೂ ದೇಶಗಳ ಯೋಧರ ಮುಖಾಮುಖಿ ಮುಂದುವರೆದಿದ್ದು ಈ ಬಿಕ್ಕಟ್ಟು ಕೊನೆಯಾಗಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ಎನ್ನಲಾಗಿದೆ.
ಭಾರತ ಚೀನಾ ಗಡಿಯಲ್ಲಿ ಯೋಧರ ನಡುವೆ ಸಂಘರ್ಷ ಆರಂಭವಾ ಹಿನ್ನಲೆಯಲ್ಲಿ ಎರಡೂ ದೇಶಗಳ ಸೇನೆಯ ಮೇಜರ್ ಜನರಲ್ ಅಥವಾ ಬ್ರಿಗೇಡಿಯರ್ ಶ್ರೇಣಿಯ ಅಧಿಕಾರಿಗಳ ನಡುವೆ ಶನಿವಾರ ನಡೆದ ಸಭೆಯಲ್ಲಿ ಈ ಬಗ್ಗೆ ಒಮ್ಮತಕ್ಕೆ ಬರಲಾಗಿದ್ದು ಗಡಿಯಲ್ಲಿ ಉದ್ಭವಿಸಿದ್ದ ಸ್ಥಿತಿಯನ್ನು ಶಮನಗೊಳಿಸಲು ಭಾರತ, ಚೀನಾ ಸಮ್ಮತಿಸಿದೆ.