ನವದೆಹಲಿ, ಜೂ 9 (Daijiworld News/MSP): ಪ್ರಸ್ತುತ ಸನ್ನಿವೇಶದಿಂದ ಈ ಬಾರಿ ಶೈಕ್ಷಣಿಕ ವರ್ಷದ ಶಾಲಾ ಪಠ್ಯಕ್ರಮ ಮತ್ತು ಕಲಿಕಾ ಅವಧಿಯನ್ನು ತಗ್ಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ಅವರು ಮಂಗಳವಾರ ಹೇಳಿದ್ದಾರೆ.
ಕೊರೊನಾ ಹುಟ್ಟುಹಾಕಿರುವ ಆತಂಕದಿಂದ ಮಕ್ಕಳ ಪೋಷಕರು ಹಾಗೂ ಶಿಕ್ಷಕರಿಂದ ಶಾಲಾರಂಭ, ಪಠ್ಯಕ್ರಮ ಹಾಗೂ ಮತ್ತಿತರ ಕುರಿತು ಸಾಕಷ್ಟು ಸಲಹೆಗಳು ಬರುತ್ತಿವೆ. ಹೀಗಾಗಿ ಶೈಕ್ಷಣಿಕ ವರ್ಷಕ್ಕೆ ಪಠ್ಯಕ್ರಮ ಮತ್ತು ಕಲಿಕಾ ಸಮಯವನ್ನು ಕಡಿಮೆ ಮಾಡುವ ಬಗ್ಗೆ ನಾವು ಆಲೋಚಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದು ಇದಕ್ಕಾಗಿ ಸಲಹೆಗಳು ನೀಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಪೋಷಕರು , ಶಿಕ್ಷಣ ತಜ್ಞರು ಹಾಗೂ ಶಿಕ್ಷಕರು #SyllabusForStudents2020 ನೊಂದಿಗೆ ಟ್ಯಾಗ್ ನೊಂದಿಗೆ ಸಲಹೆ ಅಭಿಪ್ರಾಯಗಳನ್ನು ಟ್ವಿಟರ್ ಮತ್ತು ಫೇಸ್ಬುಕ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಿಮ್ಮ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.