ಬೆಂಗಳೂರು, ಜೂ. 03 (Daijiworld News/MB) : ಜೂನ್ 18 ರಂದು ನಡೆಯುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪರೀಕ್ಷಾ ಕೇಂದ್ರದ ತಾತ್ಕಾಲಿಕ ಪಟ್ಟಿ ಬಿಡುಗಡೆಯಾಗಿದೆ.
ಶಿಕ್ಷಣ ಇಲಾಖೆ ಪಟ್ಟಿ ಬಿಡುಗಡೆ ಮಾಡಿದ್ದು ತಿದ್ದುಪಡಿ ಮಾಡಲು ಇದ್ದಲ್ಲಿ ಸಂಬಂಧ ಪಟ್ಟ ಕಾಲೇಜುಗಳ ಪ್ರಾಚಾರ್ಯರ ಮೂಲಕ ತಿದ್ದುಪಡಿ ಮಾಡಲು ಜೂನ್ 5ರವೆರೆಗೆ ಅವಕಾಶ ನೀಡಲಾಗಿದೆ.
ಜೂನ್ 7 ರಂದು ಅಂತಿಮ ಪಟ್ಟಿ ಪ್ರಕಟಿಸಲಿದ್ದು www,pue.kar.nic.in ವೆಬ್ಸೈಟ್ನಲ್ಲಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಬಹುದಾಗಿದೆ.
ಕೊರೊನಾ ಲಾಕ್ಡೌನ್ ಇರುವ ಕಾರಣದಿಂದಾಗಿ ತಮ್ಮ ಮನೆಗಳಿಗೆ ತೆರಳಿರುವ ವಿದ್ಯಾರ್ಥಿಗಳಿಗೆ ಅವರು ಇರುವ ಪ್ರದೇಶದಲ್ಲೇ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಈಗಾಗಲೇ ಇಲಾಖೆ ಅವಕಾಶ ಕಲ್ಪಿಸಿದ್ದು ಅದಕ್ಕಾಗಿ ವಿದ್ಯಾರ್ಥಿಗಳು ಆದ್ಯತೆಯ ಮೇರೆಗೆ ಮೂರು ಪರೀಕ್ಷಾ ಕೇಂದ್ರಗಳನ್ನು ಉಲ್ಲೇಖಿಸಿ ಅರ್ಜಿ ಹಾಕಲು ತಿಳಿಸಲಾಗಿತ್ತು. ಇದೀಗ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಲಾಗಿದೆ.