ಚಿಕ್ಕಮಗಳೂರು, ಮೇ 18 (Daijiworld News/MSP): ಕೊರೊನಾ ಸೋಂಕು ದೇಶವ್ಯಾಪಿ ಹರಡಿದ್ದು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ನಿಯಮ ಹಾಗೂ ನಿರ್ದೇಶನಗಳನ್ನು ಪಾಲಿಸುವ ಮೂಲಕ ರಂಜಾನ್ ಮಾಸಾಚರಣೆಯನ್ನು ಆಚರಿಸುವಂತೆ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.
ರಂಜಾನ್ ಮಾಸವು ಉಪವಾಸ ಇರುವ ಮೂಲಕ ಆತ್ಮನಿವೇದನೆ ಮಾಡಿಕೊಳ್ಳುವ ಸಮಯ ಆದರೆ ಕೊರೂನಾ ಸೋಂಕು ಎಲ್ಲೆಡೆ ವ್ಯಾಪಿಸಿ ಜನರ ಸಂಭ್ರಮವನ್ನ ಕಸಿದಿದೆ ಹಾಗಾಗಿ ಸರ್ಕಾರ ನಮ್ಮೆಲ್ಲರ ಸುರಕ್ಷತೆ ದೃಷ್ಟಿಯಿಂದಾಗಿ ದೇವಾಲಯ, ಮಸೀದಿ, ಚರ್ಚುಗಳಲ್ಲಿ ಉತ್ಸವ, ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿದ್ದು ಇಲ್ಲಿ ಜನರ ನಂಬಿಕೆಗೆ ತೊಂದರೆ ಮಾಡುವ ಉದ್ದೇಶವಿಲ್ಲ, ಕೊರೊನಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗದ ಪ್ರಮಾಣ ಹೆಚ್ಚಾಗಿದೆ ಹಾಗಾಗಿ ಇದರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಸಾಮಾಜಿಕ ಅಂತರ, ವೈಯಕ್ತಿಕ ಸ್ವಚ್ಚತೆ ಮೂಲಕ ಇದರ ನಿಯಂತ್ರಣಕ್ಕೆ ಶ್ರಮಿಸಬೇಕು ಎಂದರು
ಈ ಬಾರಿಯ ರಂಜಾನ್ ಮಾಸಾಚರಣೆಯನ್ನು ಮುಸಲ್ಮಾನ ಬಾಂಧವರು ಇಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಸ್ವಯಂ ನಿರ್ಧಾರ ಕೈಗೊಂಡು ಆಚರಿಸಬೇಕಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುಮತಿ ನಿರ್ದೇಶನದಂತೆ ರಂಜಾನ್ ಆಚರಣೆ ಮಾಡಬೇಕು ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಆಚರಣೆಗೆ ಅನುಮತಿ ಸಿಕ್ಕಲ್ಲಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಆಚರಿಸಬೇಕು ಅನುಮತಿ ನೀಡದಿದ್ದಲ್ಲಿ ಮನೆಯಲ್ಲೇ ಪ್ರಾರ್ಥಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಕೇಳಿಕೊಂಡರು.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಸದ್ಯ ಇದಕ್ಕೆ ಯಾವುದೇ ಔಷಧಿಗಳು ಇಲ್ಲ ಹೊರ ಭಾಗದಿಂದ ಯಾವುದೇ ವ್ಯಕ್ತಿಗಳು ಬಂದಲ್ಲಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಸಹಕರಿಸಬೇಕು ರಂಜಾನ್ ಹಬ್ಬದ ವೇಳೆ ಇರುವ ವಿನಾಯಿತಿಯಂತೆಯೇ ಆಚರಿಸಬೇಕು ಎಂದು ತಿಳಿಸಿದರು.