ಬೆಂಗಳೂರು, ಎ.30 (DaijiworldNews/PY) : ಲಾಕ್ ಡೌನ್ ಸಡಿಲದ ಬಗ್ಗೆ ಹಾಗೂ ಮದ್ಯ ಮಾರಾಟ ಪುನಃ ಆರಂಭಿಸುವ ಬಗ್ಗೆ, ಕಟ್ಟಿಂಗ್ ಶಾಪ್ ಓಪನ್ ಮಾಡುವ ಬಗ್ಗೆ ಮೇ 3ರ ಬಳಿಕವೇ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ಸಂಪುಟ ಸಭೆಯ ನಂತರ ಮಾತನಾಡಿದ ಅವರು, ಮೇ.೩ರ ಬಳಿಕ ಲಾಕ್ಡೌನ್ ಸಡಿಲದ ವಿಚಾರವಾಗಿ ತೀರ್ಮಾನ ಮಾಡಲಾಗುವುದು. ಅಲ್ಲದೇ, ಕಟ್ಟಿಂಗ್ ಶಾಪ್ ಓಪನ್ ಮಾಡುವ ಬಗ್ಗೆ, ಮದ್ಯ ಮಾರಾಟ ಮಾಡುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೊಟೇಲ್ನಿಂದ ಪಾರ್ಸೆಲ್ ಮಾತ್ರವೇ ಒಯ್ಯಬಹುದು. ಮಾಲ್, ಹೊಟೇಲ್ಗಳು ಕೂಡಾ ತೆರೆಯುವಂತಿಲ್ಲ. ಈ ಎಲ್ಲಾ ವಿಚಾರದಲ್ಲಿ ಕೇಂದ್ರದ ಮಾರ್ಗಸೂಚಿ ಬಂದ ನಂತರವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಿಯಂತ್ರಣ ವಲಯವನ್ನು ಹೊರತು ಪಡಿಸಿ ಇತರ ಕಡೆಗಳಲ್ಲಿ ಕೈಗಾರಿಕೆ ಪ್ರಾರಂಭ ಮಾಡಲು ಕ್ರಮ ತೆಗೆದುಕೊಳ್ಳಲಾಗಿದ್ದು, ಕೈಗಾರಿಕೋದ್ಯಮಿಗಳೊಂದಿಗೆ ಇಂದು ಸಂಜೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.