ಕೇರಳ, ಎ.29 (DaijiworldNews/PY) : ಕೇರಳದ ವಯನಾಡು ಜಿಲ್ಲೆಯಲ್ಲಿ ಜನರು ಮಾಸ್ಕ್ ಧರಿಸದೇ ಸಿಕ್ಕಿ ಬಿದ್ದರೆ, ಅವರಿಗೆ 5000 ರೂ ದಂಡ ವಿಧಿಸಲಾಗುತ್ತದೆ ಎಂದು ವಯನಾಡಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಆರ್. ಇಲಾಂಗೋ ಪ್ರಕಟಿಸಿದ್ದಾರೆ.
ಇದರೊಂದಿಗೆ ಇನ್ನೊಂದು ಮಾರ್ಗಸೂಚಿ ಎಂದರೆ, ಯಾವುದೇ ಅಂಗಡಿಯಲ್ಲಿ ಸ್ಯಾನಿಟೈಜರ್ ಅಥವಾ ಸೋಪ್ ಇಲ್ಲದಿದ್ದಲ್ಲಿ 1000 ರೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ವಯನಾಡ್ ಜಿಲ್ಲೆಯು ಗ್ರೀನ್ ಝೋನ್ ಆಗಿದ್ದು, ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿಲ್ಲ. ಆದರೆ, ಮನೆಗಳಲ್ಲಿ ಸುಮಾರು 842 ಜನರು ಹಾಗೂ ಆಸ್ಪತ್ರೆಗಳಲ್ಲಿ ಒಂಭತ್ತು ಜನರ ಮೇಲೆ ನಿಗಾ ವಹಿಸಲಾಗಿದೆ.