National
'ಭಾರತವನ್ನು ಸರ್ವನಾಶ ಮಾಡಲು ಕೊರೊನಾ ಜಿಹಾದ್' - ಅನಂತ್ ಕುಮಾರ್ ಹೆಗಡೆ
- Thu, Apr 23 2020 02:30:42 PM
-
ಬೆಂಗಳೂರು, ಎ.23 (Daijiworld News/MB) : ಇತ್ತೀಚೆಗೆ ಕೊರೊನಾ ಸೋಂಕನ್ನು ತಬ್ಲೀಘ್ ವೈರಸ್, ಜಿಹಾದ್ ವೈರಸ್ ಎಂಬಂತೆ ಬಿಂಬಿಸಿ ತಮ್ಮ ಲೇಖನಗಳನ್ನು ಬರೆಯುತ್ತಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಈ ಭಾರೀ ಭಾರತವನ್ನು ಸರ್ವನಾಶ ಮಾಡಲು ಕೊರೋನಾ ಜಿಹಾದ್. ಭಾರತವನ್ನು ಸರ್ವನಾಶ ಮಾಡಲೆಂದೇ ಅತ್ಯಂತ ಭಯಾನಕ ಕೊರೋನಾ ಜಿಹಾದ್ ನಡೆಸಲಾಗುತ್ತಿದೆ ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ. ಇದರ ಹಿಂದೆ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರವೇ ಇದೆ. ಹಲವಾರು ಇಸ್ಲಾಮಿಕ್ ದೇಶಗಳ, ಇಸ್ಲಾಮಿಕ್ ಜಿಹಾದೀ ಸಂಘಟನೆಗಳ ಕೈವಾಡ ದಿನೇ ದಿನೇ ಬೆಳಕಿಗೆ ಬರುತ್ತಿದೆ ಎಂದು ಆಪಾದನೆ ಮಾಡಿದ್ದಾರೆ.
ಈ ಕುರಿತಾಗಿ ಅವರು ತಮ್ಮ ಸೈಟ್ನಲ್ಲಿ ಲೇಖನ ಬರೆದಿದ್ದು ಅದನ್ನು ಟ್ವೀಟ್ ಮಾಡಿದ್ದಾರೆ.
ಅನಂತ್ ಕುಮಾರ್ ಹೆಗಡೆಯವರ ಈ ಲೇಖನಕ್ಕೆ ಸಕರಾತ್ಮಕ ಹಾಗೂ ನಕಾರಾತ್ಮಕ ಅಭಿಪ್ರಾಯಗಳು ಬಂದಿದ್ದು ಹಲವರು ವಿಶ್ವವೇ ಸಂಕಷ್ಟದಲ್ಲಿರುವಾಗ ರಾಜಕೀಯ ಮಾಡಿ ಜನರನ್ನು ಒಂದು ಧರ್ಮದ ವಿರುದ್ಧವಾಗಿ ಎತ್ತಿಕಟ್ಟಲು ಅನಂತ್ ಕುಮಾರ್ ಅವರು ಈ ರೀತಿ ಯಾವುದೇ ಸಾಕ್ಷ್ಯಾಧಾರವಿಲ್ಲದ ಆರೋಪಗಳನ್ನು ಮಾಡಿ ಬರೆಯುತ್ತಾರೆ ಎಂದು ದೂರಿದ್ದರೆ, ಇನ್ನು ಕೆಲವರು ಇದು ಸರಿಯಾಗಿದೆ. ನಮಗೆ ತಮ್ಮ ಬರವಣಿಗೆ ಮೂಲಕ ತಿಳುವಳಿಕೆ ನೀಡಿದ್ದೀರಿ ಎಂದು ಹೇಳಿದ್ದಾರೆ.
ಭಾರತವನ್ನು ಸರ್ವನಾಶ ಮಾಡಲು - ಕೊರೋನಾ ಜಿಹಾದ್..! - ಸಂಶಯವೇ ಬೇಡ... ಇದು ಕಟುಸತ್ಯ ..! ಇದುವೇ ಕಠೋರ ವಾಸ್ತವ...! ಎಂದು ಹೇಳುವ ಅವರು ಗಟ್ಟಿಮುಟ್ಟಾದ ಬಲಿಷ್ಠ ರಟ್ಟೆಗಳಿದ್ದರೂ ಪ್ರಯೋಜನಕ್ಕೆ ಬರದೇ ಜೀವವುಳಿಸಿಕೊಳ್ಳಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಬದುಕಬೇಕಾದ ದೈನೇಸಿ ಸ್ಥಿತಿಗೆ ಮನುಷ್ಯ ಇವತ್ತು ತಲುಪಿದ್ದಾನೆ. ಅದೆಂಥಾ ಅತ್ಯಾಧುನಿಕ ಬಾಂಬುಗಳು, ಗನ್ನುಗಳು, ವಿಮಾನಗಳು, ಮಿಸೈಲುಗಳಿದ್ದರೂ ತಕ್ಷಣಕ್ಕೇನೂ ಪ್ರಯೋಜನಕ್ಕೆ ಬರದೇ, ಕೊರೋನಾ ಎಂಬ ಕಣ್ಣಿಗೆ ಕಾಣದ ಶತ್ರುವಿನ ಎದಿರು ಮನುಷ್ಯ ಹೈರಾಣಾಗಿ ಶರಣಾಗಿದ್ದಾನೆ. ಭೀಕರ ವ್ಯಾಧಿಗಳಿಂದ ನಮ್ಮನ್ನೆಲ್ಲಾ ರಕ್ಷಿಸುತ್ತಾರೆ ಅಂತ ನಂಬಿದ್ದ ಆಧುನಿಕ ವೈಜ್ಞಾನಿಕ ಪದ್ಧತಿಯ ವೈದ್ಯರೇ ಭಯಬಿದ್ದು ಮುಸುಕಿನೊಳಗೆ ಸೇರಿ ರೋಗಿಗಳ ಜೊತೆಗೆ ತಮ್ಮನ್ನೂ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಪೂರ್ತಿ ಪ್ರಪಂಚವೇ ಇವತ್ತು ಈ ಕೊರೋನಾ ಎಂಬ ಕರಾಳ ವ್ಯಾಧಿಯ ಕರಿನೆರಳಲ್ಲಿ ಕಂಗೆಟ್ಟು ಕುಳಿತಿರುವಾಗ, ಸೋಂಕಿಗೊಳಗಾದ ರೋಗಿಗಳು ಅದ್ಯಾವ ದೇಶದವರೇ ಆಗಲಿ, ಅದ್ಯಾವ ಬಣ್ಣದವರೇ ಆಗಿರಲಿ, ಅದ್ಯಾವ ಜಾತಿ, ಮತ, ಪಂಗಡಗಳಿಗೇ ಸೇರಿರಲಿ, ಎಲ್ಲರೂ ಈ ಸಾಂಕ್ರಾಮಿಕ ಸಂಕಷ್ಟದಿಂದ ಪಾರಾಗಲಿ, ಭೀಕರ ಖಾಯಿಲೆಯಿಂದ ಗುಣಮುಖರಾಗಿ ಜೀವವುಳಿಸಿಕೊಳ್ಳಲಿ ಅಂತ ಜಗತ್ತಿನ ಅಷ್ಟೂ ಜನ ಬಯಸುತ್ತಿರುವ ಹೊತ್ತಿನಲ್ಲೇ ಅದೆಲ್ಲದಕ್ಕೂ ವ್ಯತಿರಿಕ್ತವಾಗಿ ಯೋಚಿಸುವ, ವಿಚಿತ್ರವಾಗಿ ಚಿಂತಿಸುವ, ವಿಕೃತವಾಗಿ ವರ್ತಿಸುವ, ಎಲ್ಲರಿಗೂ ವೈರಸ್ಸು ಸೋಂಕಲಿ, ಎಲ್ಲ ಕಡೆಗೂ ರೋಗ ಹರಡಲಿ, ಈ ಮಾರಕ ಖಾಯಿಲೆ ಸಾಂಕ್ರಾಮಿಕವಾಗಲಿ, ಹೆಂಗಸರು ಮಕ್ಕಳು ವೃದ್ಧರೆನ್ನದೇ ಎಲ್ಲರೂ ಹುಳುಗಳಂತೆ ಬಿದ್ದು ಒದ್ದಾಡಿ ಸಾಯಲಿ ಅಂತ ಬಯಸುವ,ಪ್ರಾರ್ಥಿಸುವ, ಮಾತ್ರವಲ್ಲದೆ ಅದಕ್ಕೆ ತಕ್ಕ ಹಾಗೆ ಸೋಂಕನ್ನು ವ್ಯಾಪಕವಾಗಿ ಹರಡಲು ಹಠತೊಟ್ಟೇ ಕಾರ್ಯಾಚರಣೆಗಿಳಿದಿರುವ ನಿರ್ಧಿಷ್ಟ ಸಮುದಾಯವೊಂದರ, ಕೆಲ ನಿರ್ದಿಷ್ಟ ಸಂಘಟನೆಗಳ ಮನಃಸ್ಥಿತಿ ನಿಜಕ್ಕೂ ಭಯಾನಕ.
ಕಟ್ಟರ್ ಇಸ್ಲಾಮಿನ ಮೂಲಭೂತವಾದೀ ಸಂಘಟನೆ ತಬ್ಲೀಘಿ ಜಮಾತ್ ಭಾರತದಲ್ಲಿ ಕೊರೋನಾ ವೈರಸ್ ಹರಡಲು ವ್ಯವಸ್ಥಿತ ಸಂಚು ನಡೆಸಿದ್ದಕ್ಕೆ ಸಾಕ್ಷಿಗಳು, ಪುರಾವೆಗಳು ಒಂದೊಂದಾಗಿ ಎದ್ದು ಬರುತ್ತಿದೆ... ಕಳೆದ ಬಾರಿಯ ಲೇಖನದಲ್ಲಿ ನಾನು ತಬ್ಲೀಘಿ ಜಮಾತ್ ಬಗ್ಗೆ, ಅದರ ನಿಗೂಢ ಕಾರ್ಯಾಚರಣೆ ಬಗ್ಗೆ, ಕೊರೋನಾ ವೈರಸ್ಸನ್ನು ಭಾರತದಲ್ಲಿ ಹರಡಲು ಅದು ವ್ಯವಸ್ಥಿತ ಸಂಚು ನಡೆಸಿದ್ದ ಬಗ್ಗೆ ಬರೆದಿದ್ದೆ. "ಇನ್ನಷ್ಟು ಭಯಾನಕ ಸಾಕ್ಷಿಗಳನ್ನು ನೀಡುತ್ತೇನೆ" ಅಂತ ಕೂಡಾ ಬರೆದಿದ್ದೆ... ಅದಕ್ಕೆ ತಕ್ಕ ಹಾಗೆ ತಬ್ಲೀಘಿ ಜಮಾತ್ ಮಾತ್ರ ಅಲ್ಲ, ಜಗತ್ತಿನಾದ್ಯಂತ ಈ ಕೊರೋನಾ ,ಮಹಾಮಾರಿ ಹಬ್ಬುತ್ತಿರುವ ಹೊತ್ತಿನಲ್ಲೇ ಅಸಂಖ್ಯಾತ ಮುಲ್ಲಾಗಳು, ಮೌಲ್ವಿಗಳು ಕೊರೋನಾ ವೈರಸ್ ಅನ್ನು ಅಲ್ಲಾಹುವೇ ಕಳಿಸಿದ್ದು, ಕಾಫಿರರನ್ನು ನಿರ್ನಾಮ ಮಾಡಲಿಕ್ಕಾಗಿಯೇ ಅಲ್ಲಾಹು ಕೊರೋನಾ ವೈರಸ್ಸು ಕಳಿಸಿದ್ದು, ಇದರಿಂದ ಮುಸ್ಲಿಮರಿಗೆ ಯಾವ ಅಪಾಯವೂ ಬರೋದಿಲ್ಲ ಅನ್ನೋ ರೀತಿಯ ಪುಂಖಾನುಪುಂಖ ಹೇಳಿಕೆಗಳನ್ನು ಈ ವರ್ಷದ ಜನವರಿ ತಿಂಗಳ ಎರಡನೆಯ ವಾರದಲ್ಲೇ ಶುರುಮಾಡಿದ್ದರು. ಕೊರೋನಾ ಎಂಬ ವೈರಸ್ಸಿನ ಭೀಕರ ಪರಿಣಾಮಗಳ ಬಗ್ಗೆ, ಅದರ ಹರಡುವಿಕೆಯ ಮುಸ್ಲಿಮ ಜಗತ್ತಿನಲ್ಲಾಗಲೇ ಒಂದು ರೀತಿಯ ಹಗುರ ಭಾವನೆ ಮೂಡಿತ್ತು. ಇದರ ಸೂಚನೆಗಳು ಭಾರತದಲ್ಲಿ ಸಿಎಎ ವಿರೋಧೀ ಹೋರಾಟಗಳಲ್ಲಿ ಪ್ರತಿಧ್ವನಿಸಿತ್ತು. ದೆಹಲಿಯ ಶಾಹೀನ್ ಭಾಗ್ ಹೋರಾಟಗಾರರ ಹೇಳಿಕೆಗಳು ಇದೇ ರೀತಿ ಇತ್ತು.ತಬ್ಲೀಘಿ ಜಮಾತ್ ನಂಥಾ ಜಗತ್ತಿನ ಅತೀ ದೊಡ್ಡ ಮುಸ್ಲಿಂ ಸಂಘಟನೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ಕೊರೋನಾ ಏಕ್ ಬಹಾನಾ ಹೈ" ( ಕೊರೋನಾ ಕೇವಲ ಒಂದು ನೆಪ ಅಷ್ಟೇ..) ಅನ್ನೋ ರೀತಿಯ ವ್ಯವಸ್ಥಿತ ಪ್ರಚಾರ ಶುರು ಮಾಡಿತ್ತು. ಅಂದರೆ "ಕಾಫಿರರನ್ನು ನಿರ್ನಾಮ ಮಾಡಲಿಕ್ಕಾಗಿಯೇ ಅಲ್ಲಾಹು ಕೊರೋನಾ ಕಳಿಸಿದ್ದು, ಇದರಿಂದ ಭೀತಿಗೊಳಗಾದ ಮುಸ್ಲಿಮೇತರರು ಈ ಕೊರೋನಾ ಎಂಬುದು ಭೀಕರ ಖಾಯಿಲೆ ... ಇದು ಸಾಂಕ್ರಾಮಿಕ ಖಾಯಿಲೆ, ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬ ನೆಪ ಒಡ್ಡಿ ಮುಸ್ಲಿಮರು ಮಸೀದಿಗೆ ತೆರಳದಂತೆ, ಎಲ್ಲರೂ ಗುಂಪಾಗಿ ನಮಾಜು ಮಾಡದಂತೆ ಪ್ರತಿಬಂಧಿಸುವ ಸಂಚು ಮಾಡುತ್ತಿದ್ದಾರೆ., ಈ ರೀತಿ ಮಾಡಿ ಮಸೀದಿಗಳನ್ನು ಮುಚ್ಚಿಸುವ ಹುನ್ನಾರ ಮಾಡುತ್ತಿದ್ದಾರೆ, ಕೊರೋನಾ ಹೆಸರಿನಲ್ಲಿ ಮುಸ್ಲಿಮರನ್ನು ಹತ್ತಿಕ್ಕಲಾಗುತ್ತಿದೆ... ಇದಕ್ಕೆ ಆಸ್ಪದ ನೀಡಬೇಡಿ" ಎಂಬ ರೀತಿಯ ಸುದ್ದಿಯನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಯಾವುದೇ ಕಾರಣಕ್ಕೂ ಮಸೀದಿಗಳಿಗೆ ಬರುವುದನ್ನು ಬಿಡಬೇಡಿ, ಸಾಮೂಹಿಕ ಪ್ರಾರ್ಥನೆಗಳನ್ನು ಮಾಡುವುದನ್ನು ಬಿಡಬೇಡಿ ಅಂತನ್ನೋ ರೀತಿಯ ಪ್ರವಚನಗಳನ್ನು ತಬ್ಲೀಘಿಗಳ ಪರಮಗುರುವೇ ಮಾಡಿದ!
ದಕ್ಷಿಣ ಏಷ್ಯಾ ದಲ್ಲಿ ನಡೆದ ತಬ್ಲೀಘಿ ಜಮಾತ್ ನ ಎಲ್ಲಾ ಸಮ್ಮೇಳನಗಳಲ್ಲೂ ಇಡೀ ರೀತಿಯಲ್ಲಿ ಪ್ರವಚನಗಳನ್ನು ಮಾಡಲಾಯಿತು. ಭಾರತದಲ್ಲಿ ತಬ್ಲೀಘಿ ಜಮಾತ್ ನ ಪರವಹಿಸಿ ಮಾತನಾಡುವ ಎಲ್ಲರೂ ಕೂಡಾ ಜಗತ್ತಿನ ತಬ್ಲೀಘಿಗಳ ಮುಖಂಡ, ಅಮೀರ್ ಹುದ್ದೆಯ ಮೌಲಾನಾ ಸಾದ್ ಖಂಡಾಲವೀ ದೆಹಲಿಯ ಮರ್ಕಜ್ ಕಾರ್ಯಕ್ರಮಗಳಲ್ಲಿ ಮಾಡಿದ ಭಾಷಣಗಳ ಬಗ್ಗೆ ಚಕಾರವೆತ್ತುವುದಿಲ್ಲ! ಮೌಲಾನಾ ನೇರವಾಗಿಯೇ ಕೊರೋನಾ ವೈರಸ್ ನ ಈ ಸಾಂಕ್ರಾಮಿಕ ಖಾಯಿಲೆ ಬಗ್ಗೆ ಪ್ರವಚನಗಳನ್ನು ನೀಡಿದ್ದ.ಕೊರೋನಾ ವೈರಸ್ಸು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬುದನ್ನು ನಿರಾಕರಿಸಿ, ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟಾನ್ಸ್) ವನ್ನು ಕಾಯ್ದುಕೊಳ್ಳುವ ನೆಪದಲ್ಲಿ ಇಸ್ಲಾಮಿನ ಸುನ್ನಾಹ್ ಅನ್ನು ಹೇಗೆ ನಿಷೇಧಿಸಲಾಗುತ್ತಿದೆ... ಮಸೀದಿಯಲ್ಲಿ ಸೇರಿ ಪ್ರಾರ್ಥನೆ ಮಾಡುವುದನ್ನು ಕೊರೋನಾ ನೆಪದಲ್ಲಿ ಹೇಗೆ ನಿಷೇಧಿಸಲಾಗುತ್ತಿದೆ, ಎಂಬುದನ್ನೆಲ್ಲಾ ವಿವರಿಸುವ, ಅದನ್ನೆಲ್ಲಾ ಯಾವುದೇ ಮುಸ್ಲಿಮನೂ ಪಾಲಿಸಬಾರದೆನ್ನುವ ರೀತಿಯ ಪ್ರವಚನಗಳನ್ನು ಮೌಲಾನಾ ನಿರಂತರವಾಗಿ ನೀಡುತ್ತಾ ಬಂದಿದ್ದ ಎಂದು ಅವರು ತಮ್ಮ ಬರಹದಲ್ಲಿ ಹೇಳಿದ್ದು ಕೆಲವೊ೦ದು ಮೌಲನಾ ಪ್ರವಚನಗಳು ಎಂದು ಹೇಳಲಾದವುಗಳನ್ನು ಉಲ್ಲೇಖ ಮಾಡಿದ್ದಾರೆ.
ಹಾಗೆಯೇ ಮೌಲಾನಾ ಕೊರೋನಾ ಸೋಂಕಿನ ಬಗ್ಗೆಯೇ ಸುಳ್ಳು ಮಾಹಿತಿಯನ್ನು ನೀಡುತ್ತಾ, ಮುಸ್ಲಿಮರನ್ನು ಸರಕಾರಗಳ ವಿರುದ್ಧ ಎತ್ತಿಕಟ್ಟುತ್ತಾ ಹಲವಾರು ಪ್ರವಚನಗಳನ್ನು ಸತತವಾಗಿ ನೀಡುತ್ತಾನೆ ಎಂದು ಆರೋಪಿಸಿರುವ ಅವರು ಮೌಲನಾ ಪ್ರವಚನದ ಕೆಲವು ಘೋಷಣೆಗಳು ಎನ್ನಲಾದ ಕೆಲವೊಂದು ಸಾಲುಗಳನ್ನು ಬರೆದಿದ್ದಾರೆ.
ಭಾರತವನ್ನು ಬರ್ಬಾದ್ ಮಾಡಲೆಂದೇ ಅತ್ಯಂತ ಭಯಾನಕ ಕೊರೋನಾ ಜಿಹಾದ್ ನಡೆಸಲಾಯಿತು ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ... ಇದರ ಹಿಂದೆ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ. ಪಾಕಿಸ್ತಾನ ಸೇರಿದಂತೆ ಹಲವಾರು ಇಸ್ಲಾಮಿಕ್ ದೇಶಗಳ, ಇಸ್ಲಾಮಿಕ್ ಜಿಹಾದೀ ಸಂಘಟನೆಗಳ ಕೈವಾಡ ಇರುವುದು ದಿನೇ ದಿನೇ ಬೆಳಕಿಗೆ ಬರುತ್ತಿದೆ ಎಂದು ಹೇಳಿದ್ದಾರೆ.
ಆದರೂ ನಮ್ಮ ದೇಶದ ಎಡಬಿಡಂಗಿ ಬುದ್ಧಿಜೀವಿಗಳು, ಎಡಚ ಪತ್ರಕರ್ತರು, ಸೋಗಲಾಡಿ ಪ್ರಗತಿಪರರು, ಮತ್ತು ಲಜ್ಜೆಗೆಟ್ಟ ಪ್ರತಿಪಕ್ಷಗಳೂ ಕೂಡಾ ಕೊರೋನಾ ಜಿಹಾದ್ ನ ಅಸ್ತಿತ್ವವನ್ನು ಒಪ್ಪುತ್ತಿಲ್ಲ... ಬದಲಿಗೆ ಸರಕಾರವನ್ನೇ ಟೀಕಿಸುತ್ತಾ. ಇಂತಹ ಸಂಕಷ್ಟ ಕಾಲದಲ್ಲೂ ಇಸ್ಲಾಮಿಕ್ ಜಿಹಾದೀ ಶಕ್ತಿಗಳ ಬೆಂಬಲಕ್ಕೆ ನಿಲ್ಲುತ್ತಿವೆ ಎಂದು ಆರೋಪಿಸಿದ್ದಾರೆ.
ಭಾರತವನ್ನು ಸರ್ವನಾಶ ಮಾಡಲೆಂದೇ ಅತ್ಯಂತ ಭಯಾನಕ ಕೊರೋನಾ ಜಿಹಾದ್ ನಡೆಸಲಾಗುತ್ತಿದೆ ಅನ್ನೋದರಲ್ಲಿ ಯಾವುದೇ ಸಂಶಯ ಇಲ್ಲ.
— Anantkumar Hegde (@AnantkumarH) April 22, 2020
ಇದರ ಹಿಂದೆ ಒಂದು ಅಂತಾರಾಷ್ಟ್ರೀಯ ಷಡ್ಯಂತ್ರವೇ ಇದೆ. ಹಲವಾರು ಇಸ್ಲಾಮಿಕ್ ದೇಶಗಳ, ಇಸ್ಲಾಮಿಕ್ ಜಿಹಾದೀ ಸಂಘಟನೆಗಳ ಕೈವಾಡ ದಿನೇ ದಿನೇ ಬೆಳಕಿಗೆ ಬರುತ್ತಿದೆ.#TablighiJamat#CoronaJihadhttps://t.co/iWGv9oIqdM