ನವದೆಹಲಿ, ಮಾ.31(DaijiworldNews/PY) : ಕೊರೊನಾ ವೈರಸ್ ವಿರುದ್ದದ ಹೋರಾಟದ ನೆರವಿಗಾಗಿ ಪ್ರಧಾನಮಂತ್ರಿ ನಾಗರಿಕ ಸಹಕಾರ ಹಾಗೂ ತುರ್ತು ಸಂದರ್ಭ ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ನೀಡುವುದಾಗಿ ಹಿರಿಯ ವಕೀಲ ರಾಕೇಶ್ ದ್ವಿವೇದಿ ತಿಳಿಸಿದ್ದಾರೆ.
ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಸ್ಥಳೀಯವಾಗಿ ಕೊರೊನಾ ವೈರಸ್ ನಿಯಂತ್ರಿಸಲು ₹1 ಕೋಟಿ ನೀಡುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮಾಡಿಕೊಂಡ ಮನವಿಗೆ 35 ಸಂಸದರು ಸ್ಪಂದಿಸಿದ್ದಾರೆ.
ದೇಶ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದು, ಈ ವೇಳೆ ಜನರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸಂಸದರನ್ನು ಉದ್ದೇಶಿಸಿ ಪತ್ರ ಬರೆದಿದ್ದರು. ಈ ವಿಚಾರಕ್ಕೆ ಸ್ಪಂದಿಸಿರುವ ಸಂಸದರು ಹಣ ನೀಡುವುದಾಗಿ ಒಪ್ಪಿಗೆ ಪತ್ರ ಕಳುಹಿಸಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಮೂಲಗಳು ತಿಳಿಸಿವೆ.
ಪಿಎಂ ಕೇರ್ಸ್ ಗೆ ತಮ್ಮ ತಿಂಗಳ ಸಂಬಳವನ್ನು ನೀಡುವುದಾಗಿ ಉತ್ತರಾಖಂಡ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರು ಘೋಷಿಸಿದ್ದಾರೆ.
ಮೂರು ದಿನಗಳ ಸಂಬಳ ನೀಡುವುದಾಗಿ ಸುಪ್ರೀಂ ಕೋರ್ಟ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಘೋಷಿಸಿದ್ದಾರೆ.