ಬೆಂಗಳೂರು, ಮಾ 28 (Daijiworld News/MSP): ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಎಲ್ಲಾ ಪ್ರಯಾಣಿಕರು ಕೊರೊನಾ ಸೋಂಕು ತಗುಲಿದೆಯೇ ಇಲ್ಲವೇ ಎಂದು ಜಿಲ್ಲಾಸ್ಪತ್ರೆಯಲ್ಲಿ ತಕ್ಷಣ ಪರೀಕ್ಷಿಸಿಕೊಳ್ಳಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಚ್ಚರಿಕೆ ನೀಡಿದೆ.
ಮಾರ್ಚ್ 21, 2020ರಂದು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ನಿಂದ ಮಂಗಳೂರಿಗೆ ಕೆಎ-19, ಎಫ್-3329 ಬಸ್ ನ ಮೂಲಕ ಪ್ರಯಾಣಿಸಿದ ಬೆಳ್ತಂಗಡಿಯ ಕರಾಯ ಮೂಲಕ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮಾತ್ರವಲ್ಲದೆ ಕೆಎ-57, ಎಫ್-3802 ಬಸ್ ನಲ್ಲಿ ದಾವಣಗೆರೆ ತೆರಳಿರುವಂತ ಪ್ರಯಾಣಿಕರು ತಪ್ಪದೇ ಜಿಲ್ಲಾಸ್ಪತ್ರೆಗೆ ತೆರಳಿ ಕೊರೊನಾ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
ಹೀಗಾಗಿ ಈ ಬಸ್ಸಿನಲ್ಲಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಈ ಮೂಲಕ ಎಚ್ಚರಿಕೆ ವಹಿಸಿ, ತಮ್ಮ ಮನೆಮಂದಿಗೆ ಹಾಗೂ ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟಿ ಎಂದು ವಿನಂತಿಸಿದೆ.