ನವದೆಹಲಿ, ಮಾ.24 (DaijiworldNews/PY) : "ಕೇಂದ್ರ ಸರ್ಕಾರ ಮಾಸ್ಕ್ಗಳ ರಫ್ತಿಗೆ, ವೆಂಟಿಲೇಟರ್ಗಳ ನಿರ್ಬಂಧ ಹೇರುವ ತೀರ್ಮಾನವನ್ನು ಕೈಗೊಳ್ಳಲು ವಿಳಂಬ ಮಾಡಿದೆ" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೇಂದ್ರ ಸರ್ಕಾರವು, ವಿಶ್ವ ಆರೋಗ್ಯ ಸಂಸ್ಥೆ ಸಲಹೆಯ ಹೊರತಾಗಿಯೂ ಮಾ.19ರವರೆಗೆ ಮಾಸ್ಕ್ಗಳು ಹಾಗೂ ವೆಂಟಿಲೇಟರ್ ರಫ್ತಿಗೆ ಅವಕಾಶ ಏಕೆ ನೀಡಿತು. ಇವುಗಳನ್ನು ಭಾರತದಲ್ಲೇ ಸಂಗ್ರಹಿಸಿಟ್ಟುಕೊಳ್ಳುವ ಬದಲು ರಫ್ತಿಗೆ ಅವಕಾಶ ನೀಡಿದ್ದು ಯಾರು. ಇದು ಸಂಚಲ್ಲವೇ" ಎಂದು ಟ್ವೀಟ್ನಲ್ಲಿ ರಾಹುಲ್ ಗಾಂಧಿ ಕೇಳಿದ್ದಾರೆ.