ನವದೆಹಲಿ, ಮಾ. 24 (Daijiworld News/MSP) : ಕೊರೊನಾ ವೈರಸ್ ಭೀತಿ ಈಗ ಏಷ್ಯಾದ ಅತೀ ದೊಡ್ಡ ಜೈಲು ಎನಿಸಿಕೊಂಡಿರುವ ನವದೆಹಲಿಯ ತಿಹಾರ್ ಜೈಲಿಗೂ ತಟ್ಟಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡಬಾರದು ಎಂಬ ನಿಟ್ಟಿನಲ್ಲಿ ಬರೋಬ್ಬರಿ 3,000 ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಸ್ವತಃ ತಿಹಾರ್ ಬಂಧಿಖಾನೆ ಡಿಜಿ ಮಾಹಿತಿ ನೀಡಿದ್ದಾರೆ.
ಜೈಲಿನಲ್ಲಿ ಕೈದಿಗಳ ಸಂಖ್ಯೆಯೂ ಜಾಸ್ತಿಯಾಗಿದ್ದು, ಕೊರೊನಾವೈರಸ್ ಭೀತಿ ಜನದಟ್ಟಣೆಯನ್ನು ಕಡಿಮೆ ಮಾಡಲು ಮುಂದಾಗಿದ್ದೇವೆ. ಹೀಗಾಗಿ, 1,500 ಅಪರಾದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ. ಅಲ್ಲದೇ, ವಿಚಾರಣಾಧೀನ ಕೈದಿಗಳನ್ನೂ ಮಧ್ಯಂತರ ಜಾಮೀನನ ಮೇಲೆ ಮೂರ್ನಾಲ್ಕು ದಿನಗಳಲ್ಲಿ ರಿಲೀಸ್ ಮಾಡಲಿದ್ದೇವೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಡೇಂಜರಸ್ ಕ್ರಿಮಿನಲ್ಗಳನ್ನ ಬಿಡುಗಡೆಗೊಳಿಸಲಾಗುವುದಿಲ್ಲ ಎಂದು ತಿಹಾರ್ ಬಂಧಿಖಾನೆ ಡಿಜಿ ತಿಳಿಸಿದ್ದಾರೆ.