ಬೀದರ್, ಮಾ.19 (DaijiworldNews/PY) : ವಾಟ್ಸಾಪ್ ಗ್ರೂಪ್ನಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಇಬ್ಬರು ಯುವಕರ ವಿರುದ್ದ ಎಫ್ಐಆರ್ ದಾಖಲಾಗಿದೆ.
ಅಹಮದ್ ಮೂಜಿಬುದ್ದಿನ್ ಎಂಬಾತ ಬೀದರ್ ಗ್ರೂಪ್ ಎಂಬ ವಾಟ್ಸಾಪ್ ಗ್ರೂಪ್ನಲ್ಲಿ ಹಾಗೂ ಮೊಹಮ್ಮದ್ ಅರ್ಷದ್ ಎಂಬಾತ ಬೀದರ್ ಲೇಟೆಸ್ಟ್ ನ್ಯೂಸ್ ಗ್ರೂಪ್ನಲ್ಲಿ ಸುಳ್ಳು ಸಂದೇಶ ಹರಿಬಿಟ್ಟು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ಧಾರೆ ಎಂದು ಸೆಕ್ಷನ್ 505(1)(ಬಿ) ಐಪಿಸಿ ಅಡಿಯಲ್ಲಿ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮಕೈಗೊಂಡಿದ್ದಾರೆ.