ಬೆಂಗಳೂರು, ಮಾ.19 (Daijiworld News/MB) : ವಿಮಾನ ನಿಲ್ದಾಣವನ್ನು ಮುಚ್ಚಿಬಿಟ್ಟರೆ ನಮ್ಮ ಮಕ್ಕಳು ಬರುವುದು ಹೇಗೆ? ಎಂಬ ವಿಷಯ ವಿಧಾನ ಪರಿಷತ್ನಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.
ವಿಧಾನ ಪರಿಷತ್ನ ಸದಸ್ಯೆ ಜಯಮಾಲಾ ಅವರ ಪುತ್ರಿ ಲಂಡನ್ ವಿಮಾನ ನಿಲ್ದಾಣದಲ್ಲಿ, ಡಾ.ವೈ.ಎ.ನಾರಾಯಣಸ್ವಾಮಿ ಅವರ ಪುತ್ರ ಪ್ಯಾರಿಸ್ನಲ್ಲಿ ಕೊರೊನಾ ವೈರಸ್ ಹಿನ್ನಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆರ್.ಬಿ.ತಿಮ್ಮಾಪೂರ ಅವರ ಪುತ್ರಿ ಬುಧವಾರವಷ್ಟೇ ಲಂಡನ್ನಿಂದ ನಗರಕ್ಕೆ ಹಿಂದಿರುಗಿದ್ದಾರೆ. ಹಾಗಾಗಿ ವಿಮಾನ ನಿಲ್ದಾಣಗಳನ್ನೇ ಮುಚ್ಚಿಬಿಟ್ಟರೆ ಹೇಗೆ? ಎಂದು ಎಂಬ ಪ್ರಶ್ನೆ ಪರಿಷತ್ನಲ್ಲಿ ಚರ್ಚೆಯಾಯಿತು.
ಈ ಮಾಹಿತಿಯು ಪರಿಷತ್ನಲ್ಲಿ ಕೊರೊನಾ ಸೋಂಕು ಕುರಿತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಹೇಳಿಕೆ ನೀಡಿದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು ಮತ್ತು ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚಬೇಕು ಎಂಬ ಸಲಹೆಯನ್ನು ಐವನ್ ಡಿಸೋಜ ನೀಡಿದಾಗ ಜಯಮಾಲಾ ಅವರು ತಮ್ಮ ಪುತ್ರಿ ಲಂಡನ್ನಲ್ಲಿ ಸಿಕ್ಕಿಬಿದ್ದಿರುವುದನ್ನು ತಿಳಿಸಿ, ವಿಮಾನ ನಿಲ್ದಾಣ ಬಂದ್ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.
ಆ ಸಂದರ್ಭದಲ್ಲಿ ಇತರ ಇಬ್ಬರೂ ತಮ್ಮ ಮಕ್ಕಳು ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡ ವಿಷಯವನ್ನು ತಿಳಿಸಿದರು.