ಬೆಂಗಳೂರು, ಮಾ.18 (DaijiworldNews/PY) : ಹೈಕೋರ್ಟ್ ಸೇರಿದಂತೆ ನಗರದ ಎಲ್ಲಾ ಕೋರ್ಟ್ಗಳಲ್ಲಿ ಕಕ್ಷಿದಾರರಿಗೆ ತಮ್ಮ ವಕೀಲರಿಂದ ಪ್ರಮಾಣ ಪತ್ರ ಇದ್ದರೆ ಮಾತ್ರವೇ ಒಳಗೆ ಪ್ರವೇಶಕ್ಕೆ ಅವಕಾಶ ಎಂದು ನಿರ್ಬಂಧ ವಿಧಿಸಲಾಗಿದೆ.
ಈ ವಿಚಾರವನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಅವರು, ಬುಧವಾರ ಪ್ರಕರಣವೊಂದರ ವಿಚಾರಣೆ ಸಂದರ್ಭ ತಿಳಿಸಿದ್ದಾರೆ.
ಬೆಂಗಳೂರು ವಕೀಲರ ಸಂಘದ ಜೊತೆ ಈ ಸಂಬಂಧ ಬುಧವಾರ ಮಧ್ಯಾಹ್ನ ಚರ್ಚಿಸಲಾಗಿದೆ. ಇಂತಹ ಸನ್ನಿವೇಶದಲ್ಲೇ ಮಂಗಳವಾರ 14 ಸಾವಿರ ಜನ ಬಂದು ಹೋಗಿದ್ದಾರೆ ಎನ್ನುವುದು ಕಳವಳಕಾರಿ ವಿಚಾರವಾಗಿದೆ. ಹಾಗಾಗಿ, ಕಕ್ಷಿದಾರರ ಹಾಜರಿ ಕಡ್ಡಾಯ ಎಂದಾದರೆ ಮಾತ್ರವೇ ವಕೀಲರ ಪ್ರಮಾಣ ಪತ್ರ ತೋರಿಸಿ ಒಳಕ್ಕೆ ಪ್ರವೇಶಿಸಬೇಕು ಎಂದು ಹೇಳಿದರು.
ಕೋರ್ಟ್ಗೆ ಆಗಮಿಸುತ್ತಿರುವ ಅನೇಕ ಕಕ್ಷಿದಾರರಲ್ಲಿ ತಾಪಮಾನದ ಪ್ರಮಾಣ ನಿಗದಿಗಿಂತ ಅಧಿಕವಾಗಿದೆ. ಹಾಗಾಗಿ, ಕೋರ್ಟ್ಗೆ ಕಕ್ಷಿದಾರರು ಭೇಟಿ ನೀಡುವುದನ್ನು ನಿಯಂತ್ರಿಸಬೇಕಿದೆ. ಆದರೆ, ಪೊಲೀಸರಿಗೆ, ಸರ್ಕಾರಿ ವಕೀಲರಿಗೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ನಿರ್ಬಂಧವಿಲ್ಲ ಎಂದು ಮೌಖಿಕವಾಗಿ ತಿಳಿಸಿದ್ದಾರೆ.