ನವದೆಹಲಿ, ಮಾ. 12 (Daijiworld News/MB) : ದೇಶಾದ್ಯಂತ ಕೊರೊನಾ ವೈರಸ್ ಪೀಡಿತರ ಸಂಖ್ಯೆ 73 ಕ್ಕೆ ಏರಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಂಸತ್ತಿನಲ್ಲಿ ಗುರುವಾರ ತಿಳಿಸಿದರು.
ಕೊರೊನಾ ವೈರಸ್ ಕಳವಳಕಾರಿ ವಿಚಾರ. ಇಂತಹ ಪರಿಸ್ಥಿಯಲ್ಲಿ ವಿದೇಶಿ ಪ್ರಯಾಣ ಬಹಳ ಅಪಾಯಕಾರಿ. ಆ ಹಿನ್ನಲೆಯಲ್ಲಿ ವಿದೇಶ ಪ್ರಯಾಣಕ್ಕೆ ಯಾರಿಗೂ ಶಿಫಾರಸು ಮಾಡುವುದಿಲ್ಲ ಎಂದು ಹೇಳಿದರು.
ಪ್ರಸ್ತುತ ದೇಶದಲ್ಲಿ 73 ಕೊರೊನಾ ಪ್ರಕರಣಗಳು ವರದಿಯಾಗಿದ್ದು ಈ ಪ್ರಕರಣದ ಸಂಖ್ಯೆಯಲ್ಲಿ ಕಳೆದ ಎರಡು ವಾರಗಳಲ್ಲಿ ಭಾರೀ ಏರಿಕೆಯಾಗಿದೆ. ಕೇರಳದಲ್ಲಿ ಅಧಿಕ ಕೊರೊನಾ ಪ್ರಕರಣ ದಾಖಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲಾ ಚಾಲ್ತಿ ಇರುವ ವೀಸಾಗಳನ್ನು ಎಪ್ರಿಲ್ 15 ರವರೆಗೆ ರದ್ದುಪಡಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ನ್ನು ಒಂದು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.