ನವದೆಹಲಿ, ಮಾ. 06 (Daijiworld News/MB) : ಕೇಂದ್ರ ಸರ್ಕಾರ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರನ್ನು ಬದಲಾಯಿಸಲು ಮುಂದಾಗಿದ್ದು ಪ್ರಸ್ತುತ ವಕ್ತಾರ ರವೀಶ್ ಕುಮಾರ್ ಅವರ ಸ್ಥಾನಕ್ಕೆ ಅನುರಾಗ್ ಶ್ರೀವಾಸ್ತವ ಅವರನ್ನು ನೇಮಕ ಮಾಡಲಿರುವುದು ಖಚಿತವಾಗಿದೆ.
ಅನುರಾಗ್ ಶ್ರೀವಾಸ್ತವ ಅವರು ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರಾಗಿ ಶೀಘ್ರವೇ ನೇಮಕವಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.
ಅನುರಾಗ್ ಶ್ರೀವಾಸ್ತವ ಪ್ರಸ್ತುತ ಇಥಿಯೋಪಿಯಾ ಮತ್ತು ಆಫ್ರಿಕಾ ಯೂನಿಯನ್ನ ಭಾರತೀಯ ರಾಯಭಾರಿಯಾಗಿದ್ದಾರೆ. ಈಗ ವಿದೇಶಾಂಗ ವ್ಯವಹಾರ ಇಲಾಖೆ ವಕ್ತಾರರಾಗಿ ನೇಮಕಗೊಳ್ಳಲಿದ್ದಾರೆ.
ಅನುರಾಗ್ ಶ್ರೀವಾಸ್ತವ ಅವರು 1999ರ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿದ್ದು ಹಲವು ದೇಶಗಳಿಗೆ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.