ನವದೆಹಲಿ, ಜ 24 (Daijiworld News/MB) : ಯುದ್ಧಗಳಲ್ಲಿ ಹಾಗೂ ಕಾರ್ಯಚರಣೆ ವೇಳೆ ಹುತಾತ್ಮರಾದ ಯೋಧರಿಗೆ ಸ್ಮಾರಣ ನಿರ್ಮಾಣ ಮಾಡಲಾಗುತ್ತದೆ, ಆದರೆ ಇದೀಗ ಸೇನೆಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಪ್ರಾಣಾರ್ಪಣೆ ಮಾಡಿದ ಪ್ರಾಣಿಗಳಿಗೂ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ.
ಕಾರ್ಗಿಲ್ ಯುದ್ಧ ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಜೀವ ಕಳೆದುಕೊಂಡ ಹೇಸರಗತ್ತೆಗಳು, ಕುದುರೆಗಳು, 300 ಶ್ವಾನಗಳು, 350 ಮಂದಿ ಹ್ಯಾಂಡ್ಲರ್ಗಳ ಕರ್ತವ್ಯಗಳನ್ನು ಆ ಸ್ಮಾರಕದಲ್ಲಿ ದಾಖಲಿಸಿ ಅದನ್ನು ಸ್ಮರಿಸಿ ಉತ್ತರ ಪ್ರದೇಶದ ಮೀರತ್ನಲ್ಲಿ ಮೊತ್ತಮೊದಲ ಸ್ಮಾರಕ ನಿರ್ಮಾಣವಾಗಲಿದೆ.
ಮೀರತ್ನ ರೆಮೌಂಟ್ ಆ್ಯಂಡ್ ವೆಟರ್ನರಿ ಕಾರ್ಪ್ಸ್ (ಆರ್ವಿಸಿ) ಸೆಂಟರ್ ಆ್ಯಂಡ್ ಕಾಲೇಜಿನಲ್ಲಿ ಈ ಸ್ಮಾರಕ ನಿರ್ಮಾಣವಾಗಲಿದ್ದು ಇದೇ ಕೇಂದ್ರದಲ್ಲಿ ಸೇನೆಯ ಬಳಕೆಗಾಗಿ ಇರುವ ಶ್ವಾನ, ಕುದುರೆ, ಹೇಸರಗತ್ತೆಗಳನ್ನು ಬೆಳೆಸಿ, ತರಬೇತಿ ನೀಡಲಾಗುತ್ತದೆ.
ಈ ಸ್ಮಾರಕದ ಪ್ರಸ್ತಾವನೆ ಬಗ್ಗೆ ರಕ್ಷಣಾ ಇಲಾಖೆ ಶೀಘ್ರದಲ್ಲಿಯೇ ಅನುಮೋದನೆ ನೀಡುವ ಸಾಧ್ಯತೆಗಳು ಇದ್ದು ಈ ಬಗ್ಗೆ ಹಿರಿಯ ಅಧಿಕಾರಿ ಮಾತನಾಡಿ, "ಈ ನಿರ್ಮಿಸಲು ಉದ್ದೇಶಿಸಿರುವ ಯೋಜನೆ ನವದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಂತೆ ಇರಲಿದೆ. ಆದರೆ ಸಣ್ಣದಾಗಿರಲಿದೆ" ಎಂದು ಹೇಳಿದ್ದಾರೆ.
ಸ್ಮಾರಕದಲ್ಲಿ ಕೆತ್ತಲಾಗುವ ಪ್ರಾಣಿಗಳ ಪೈಕಿ ಮಾನಸಿ ಎಂಬ ಲ್ಯಾಬ್ರಡಾರ್ ತಳಿಯ ಶ್ವಾನ ಪ್ರಧಾನವಾಗಿದ್ದು ಈ ಶ್ವಾನಕ್ಕೆ ತರಬೇತಿ ನೀಡಿ ಆರೈಕೆ ಮಾಡಿದ ಬಶೀರ್ ಅಹ್ಮದ್ ವಾರ್ಗೂ ಈಗಾಗಲೇ ಮರಣೋತ್ತರ ಗೌರವ ನೀಡಲಾಗಿದೆ.