ಅಮರಾವತಿ, ಜ.20 (Daijiworld News/PY) : ಆಂಧ್ರ ಪ್ರದೇಶ ವಿಕೇಂದ್ರಿಕರಣ ಹಾಗೂ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆ–2020 ಅನ್ನು ಆಂಧ್ರ ಪ್ರದೇಶದ ವಿಧಾನಸಭೆ ಅಧಿವೇಶನದಲ್ಲಿ ಸೋಮವಾರ ಮಂಡಿಸಲಾಗಿದೆ.
ಈ ಮಸೂದೆಯ ಪ್ರಕಾರ ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ, ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯನ್ನಾಗಿ ಹಾಗೂ ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಲು ನಿರ್ಧರಿಸಲಾಗಿದ್ದು, ರಾಜ್ಯವನ್ನು ವಿವಿಧ ವಿಭಾಗಳನ್ನಾಗಿ ವಿಭಾಗಿಸಿ, ವಲಯ ಅಭಿವೃದ್ದಿ ಯೋಜನೆ ಹಾಗೂ ಮಂಡಳಿಗಳ ಸ್ಥಾಪನೆ ವಿಚಾರವಾಗಿಯೂ ಮಸೂದೆಯಲ್ಲಿ ವಿವರಿಸಲಾಗಿದೆ.
ಅಧಿವೇಶನಕ್ಕೂ ಮೊದಲು ಜಗನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರದ ಕರಡು ಮಸೂದೆ ಅಂಗೀಕಾರಗೊಂಡಿದ್ದು, ರಾಜಧಾನಿಗೆ ಸಂಬಂಧಿಸಿದಂತ ಸಚಿವರು ಹಾಗೂ ಅಧಿಕಾರಿಗಳನ್ನೊಳಗೊಂಡ ತಜ್ಞರ ಸಮಿತಿಯ ಶಿಫಾರಸುಗಳಿಗೆ ಸಂಪುಟ ಒಪ್ಪಿಗೆ ಕೊಟ್ಟಿದೆ.