ಗಾಂಧಿನಗರ, ಜ 6 (Daijiworld News/MB) : ಒಂದಕ್ಕಿಂತ ಹೆಚ್ಚು ಬಾರಿ ಸಾಕು ನಾಯಿ ಸಾರ್ವಜನಿಕರನ್ನು ಕಚ್ಚಿದ್ದರೆ ನಾಯಿಯ ಮಾಲಕ ಜೈಲು ವಾಸ ಅನುಭವಿಸಬೇಕಾಗುತ್ತದೆ.
ಗುಜರಾತ್ನ ಘೋದಸಾರ್ ನಿವಾಸಿ ಭಾರೇಶ್ ಪಾಂಡ್ಯಾ ನಾಯಿಯನ್ನು ಸಾಕಿದ್ದು ಈ ನಾಯಿ ನಾಲ್ವರಿಗೆ ಕಚ್ಚಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ೨೦೧೪ರಲ್ಲಿ ದೂರು ದಾಖಲಾಗಿದ್ದು ನಾಯಿಯ ಮಾಲಕನಾದ ಪಾಂಡ್ಯಾ ಅವರಿಗೆ ಸ್ಥಳೀಯ ನ್ಯಾಯಾಲಯ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಈ ಘಟನೆ 2012 ಮತ್ತು 2014ರ ನಡುವೆ ಘೋಡಾಸರ್ ನಲ್ಲಿನ ಆಶಾಪುರಿ ಸೊಸೈಟಿಯಲ್ಲಿ ಪಾಂಡ್ಯಾ ಅವರು ಸಾಕಿದ್ದ ನಾಯಿ ನೆರೆಹೊರೆಯ ಮನೆಯವರಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದು ಈ ಪೈಕಿ ಅವಿನಾಶ್ ಪಾಟೀಲ್ ಎಂಬವರು, "ನಾಯಿಯ ದಾಳಿಯಿಂದಾಗಿ ನನ್ನ ಮೂಳೆಗಳು ಮುರಿದಿದೆ" ಎಂದು ನಾಯಿಯ ಮಾಲಕನ ವಿರುದ್ಧ ದೂರು ದಾಖಲು ಮಾಡಿದ್ದರು.
ನಾಯಿಯನ್ನು ಸಾಕಿದ ಮಾಲಕನ ಬೇಜವಾಬ್ದಾರಿ ವರ್ತನೆಯಿಂದ ಇಂತಹ ಘಟನೆ ನಡೆದಿದೆ ಎಂದು ನ್ಯಾಯಾಲಯವು ತೀರ್ಮಾನ ಮಾಡಿದ್ದು ಜೈಲು ಶಿಕ್ಷೆ ವಿಧಿಸಿದೆ. ಈ ಮೊದಲು ಪಾಂಡ್ಯಾನಿಗೆ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಅಭಿಪ್ರಾಯ ತಿಳಿಸಿದ್ದು ಪಾಂಡ್ಯಾ ಈ ಪ್ರಕರಣದಲ್ಲಿ ಆರೋಪಿ ಎಂದು ತಿಳಿಸಿದೆ.
ಪಾಂಡ್ಯಾ ಜೈಲು ಶಿಕ್ಷೆ ನೀಡದಂತೆ ಕೋರ್ಟ್ಗೆ ಮನವಿ ಸಲ್ಲಿಸಿದ್ದು ಈ ಮನವಿಯನ್ನು ನ್ಯಾಯಾಲಯವು ತಿರಸ್ಕಾರ ಮಾಡಿ ಒಂದು ವರ್ಷದ ಜೈಲು ಶಿಕ್ಷೆ ಮತ್ತು 1,500 ರೂ. ದಂಡ ವಿಧಿಸಿ ಆದೇಶ ಪ್ರಕಟಿಸಿದೆ.