ನವದೆಹಲಿ, ಡಿ 28(Daijiworld News/PY) : "ನೋಟು ನಿಷೇಧಕ್ಕಿಂತಲೂ ಎನ್'ಪಿಆರ್ ಹಾಗೂ ಎನ್ಆರ್'ಸಿ ಮಾರಕವಾಗಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ.
135ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ಸಂದರ್ಭ ಎಐಸಿಸಿ ಕಚೇರಿಯಲ್ಲಿ ಬಾವುಟ ಹಾರಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಯಾವುದೇ ಹಣ ಮೊದಲು ಬಂದರೆ ಪ್ರಧಾನಿ ಮೋದಿಯವರ 15 ಆಪ್ತ ಸ್ನೇಹಿತರ ಜೇಬಿಗೆ ಸೇರುತ್ತದೆ, ಅವರ 15 ಆಪ್ತ ಸ್ನೇಹಿತರು ಯಾವುದೇ ದಾಖಲಾತಿಗಳನ್ನು ಹೊಂದಿಲ್ಲ" ಎಂದು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, "ನೋಟು ನಿಷೇಧಕ್ಕಿಂತಲೂ ಎನ್'ಪಿಆರ್ ಎನ್ಆರ್'ಸಿ ಅಪಾಯಕಾರಿಯಾಗಿದೆ"ಎಂದು ಹೇಳಿದ್ದಾರೆ.
ಅಕ್ರಮ ವಲಸಿಗರ ಬಂಧನಕ್ಕೆ ಯಾವುದೇ ರೀತಿಯ ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಿಲ್ಲ ಎಂಬ ಮೋದಿಯವರ ಹೇಳಿಕೆಯ ವಿರುದ್ದ ಮಾತನಾಡಿದ ರಾಹುಲ್ ಗಾಂಧಿ, "ನಾನು ಮಾಡಿದ ಟ್ವೀಟ್ನಲ್ಲಿ ಮೋದಿಯವರ ಭಾಷಣವನ್ನು ನೀವೆಲ್ಲರೂ ಕೇಳಿರಬಹುದು, ಈ ವಿಡಿಯೋದಲ್ಲಿ ಅಸ್ಸಾಂನಲ್ಲಿ ನಿರ್ಮಾಣವಾಗುತ್ತಿರುವ ನಿರಾಶ್ರಿತ ಕೇಂದ್ರಗಳ ವಿಡಿಯೋ ಇದೆ. ಆದರೆ ಈ ವಿಚಾರವಾಗಿ ಸುಳ್ಳು ಹೇಳುತ್ತಿರುವುದು ಯಾರು" ಎಂದು ಪ್ರಶ್ನಿಸಿದ್ದಾರೆ.
"ನೋಟು ಬ್ಯಾನ್ ವಿಚಾರದಲ್ಲಿ ಸಾಮಾನ್ಯ ಜನರಿಗೆ ತೆರಿಗೆ ಬಿದ್ದಿತ್ತು, ಜನಸಾಮಾನ್ಯರು ಕಷ್ಟ ಅನುಭವಿಸಿದ್ದಾರೆ, ಬ್ಯಾಂಕ್ಗೆ ಹೋಗಿ ಹಣ ನೀಡಿ, ಆದರೆ ಮತ್ತೆ ಆ ಹಣವನ್ನು ಹಿಂತೆಗೆದುಕೊಳ್ಳಿ, ನಿಮ್ಮಲ್ಲಿರುವ ಹಣ ಶ್ರೀಮಂತರ ಕೈಸೇರಲಿದೆ, ಅದೇ ರೀತಿ ಎನ್ಆರ್ಸಿ ಹಾಗೂ ಎನ್'ಪಿಆರ್ಯಿಂದ ದೇಶದ ಜನರ ಮೇಲೆ ತೆರಿಗೆ ಬೀಳುತ್ತಿದೆ" ಎಂದು ತಿಳಿಸಿದ್ದಾರೆ.