ನವದೆಹಲಿ, ಅ 13 (Daijiworld News/MSP): ದೆಹಲಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಸುದ್ದಿಯಾಗುತ್ತಿದೆ. ಶನಿವಾರ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ ಅಣ್ಣನ ಮಗಳ ಪರ್ಸ್ ಅನ್ನು ಬೈಕ್ನಲ್ಲಿ ಹಿಂಬಾಲಿಸಿ ಬಂದ ಕಳ್ಳರು ಕದ್ದೊಯ್ದಿದ್ದಾರೆ.
ಮೋದಿ ಅವರ ಸಹೋದರನ ಪುತ್ರಿ ದಮಯಂತಿ ಮೋದಿ ಸಿವಿಲ್ ಲೈನ್ ಪ್ರದೇಶದ ಗುಜರಾತಿ ಸಮಾಜ ಭವನದ ಬಳಿ ಆಟೋರಿಕ್ಷಾದಿಂದ ಇಳಿಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಮೃತಸರದಿಂದ ಬೆಳಿಗ್ಗೆ ದೆಹಲಿಗೆ ಆಗಮಿಸಿದ್ದ ದಮಯಂತಿ, ಕೆಲ ಕಾಲ ಭವನದಲ್ಲಿ ತಂಗಿದ್ದು, ಸಂಜೆ ವೇಳೆಗೆ ಆಹಮದಾಬಾದ್ಗೆ ಮರಳುವವರಿದ್ದರು.
ಹಳೆ ದೆಹಲಿಯ ರೈಲ್ವೇ ನಿಲ್ದಾಣದ ಕಡೆಯಿಂದ ನುಗ್ಗಿ ಬಂದ ಕಳ್ಳರು ಅವರ ಪರ್ಸ್ ಅನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಪರ್ಸ್ನಲ್ಲಿ 56,000 ರೂ. ನಗದು, ಎರಡು ಮೊಬೈಲ್ ಫೋನ್ಗಳು ಹಾಗೂ ಕೆಲ ಮಹತ್ವದ ದಾಖಲೆಗಳನ್ನು ಹೊಂದಿದ್ದಾಗಿ ದಮಯಂತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.