ಹೈದರಾಬಾದ್, ಅ 5 (Daijiworld News/RD): ಅಪಾರ್ಟ್ಮೆಂಟ್ ವೊಂದರಲ್ಲಿ ಭೀಕರವಾಗಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಇಸ್ರೋ ವಿಜ್ಞಾನಿ ಸುರೇಶ್, ಇದೀಗ ಅವರ ಹತ್ಯೆಗೆ ಸಲಿಂಗಕಾಮ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ.
ಸುರೇಶ್ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದ ಕಾರಣ ಅದು ಸಹಜ ಸಾವಲ್ಲ ಎಂಬ ಅನುಮಾನ ಎದ್ದಿತ್ತು. ಅವರು ಸಾವಿಗೀಡಾದ ದಿನ ಅವರೊಂದಿಗೆ ಲ್ಯಾಬ್ ಟೆಕ್ನಿಶಿಯನ್ ಶ್ರೀನಿವಾಸ್ ಎಂಬುವವರಿದ್ದರು ಎಂಬ ಅಂಶ ಬೆಳಕಿಗೆ ಬಂದಿದ್ದು, ಅವರಿಬ್ಬರ ನಡುವೆ ಸಲಿಂಗಕಾಮವಿತ್ತು ಎನ್ನಲಾಗಿದೆ.
ಸುರೇಶ್ ಲ್ಯಾಬ್ ಟೆಕ್ನೀಷಿಯನ್ ಜೊತೆ ಸಲಿಂಗ ಸ್ನೇಹ ಹೊಂದಿದ್ದು, ನಂತರ ಆತನಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಲ್ಯಾಬ್ ಟೆಕ್ನೀಷಿಯನ್ ವಿಜ್ಞಾನಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 39 ವರ್ಷದ ಲ್ಯಾಬ್ ಟೆಕ್ನೀಷಿಯನ್ ನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಜಂಗಮ ಶ್ರೀನಿವಾಸ್ ವಿಜ್ಞಾನಿಯನ್ನು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
56 ವರ್ಷದ ಇಸ್ರೋ ವಿಜ್ಞಾನಿ ಎಸ್.ಸುರೇಶ್ ಹೈದರಬಾದ್ ನಗರದ ಹೃದಯಭಾಗದಲ್ಲಿರುವ ಅಮೀರ್ಪೇಟೆ ಪ್ರದೇಶದ ಅನ್ನಪೂರ್ಣ ಅಪಾರ್ಟ್ಮೆಂಟ್ನಲ್ಲಿರುವ ಅವರು ವಾಸವಾಗಿದ್ದರು. ಸುರೇಶ್ ಅವರು ಕೇರಳ ಮೂಲದವರಾಗಿದ್ದು, ಫ್ಲ್ಯಾಟ್ ನಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಪತ್ನಿ ಚೆನ್ನೈ ನಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಕಚೇರಿಗೆ ಗೈರು ಹಾಜರಾಗಿರುವುದನು ಗಮನಿಸಿದ ಅವರ ಸಹೋದ್ಯೋಗಿಯೊಬ್ಬರು ಅವರ ಮೊಬೈಲ್ ಗೆ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸದಿರುವುದರಿಂದ ಅವರ ಚೆನ್ನೈನ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ನಿ ಇಂದಿರಾಗೆ ಮಾಹಿತಿ ನೀಡಿದ್ದರು. ಆ ಬಳಿಕ ಸುರೇಶ್ ಅವರ ಪತ್ನಿ ಹಾಗೂ ಕುಟುಂಬದ ಸದಸ್ಯರು ಹೈದರಬಾದ್ ಗೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಫ್ಯ್ಲಾಟ್ ಗೆ ತೆರಳಿದಾಗ ಸುರೇಶ್ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.