ಬೆಂಗಳೂರು,ಆ 30 (Daijiworld News/RD): ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಫ್ಲಾಟ್ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಅವರ ಮನೆಯಲ್ಲಿ ಸಿಕ್ಕ ಅಕ್ರಮ ಹಣದ ತನಿಖೆ ನಡೆಸಲು ಕೋರ್ಟ್ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದು,ಇದೀಗ ಮಾಜಿ ಸಚಿವ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಫ್ಲಾಟ್ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಅಕ್ರಮ ಹಣ ಪತ್ತೆಯಾಗಿತ್ತು. ಡಿಕೆಶಿ ಹಾಗೂ ಆಪ್ತರ ಮನೆಗಳಲ್ಲಿ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಇಡಿ ಸಮನ್ಸ್ ರದ್ದು ಕೋರಿ ಸಚಿವ ಡಿಕೆಶಿ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಆಗಸ್ಟ್ 28 ಕ್ಕೆ ಆದೇಶ ಪ್ರಕಟಿಸುವುದಾಗಿ ಹೈಕೋರ್ಟ್ ತಿಳಿಸಿತ್ತು. ಹಣದ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು. ಈ ಬಗ್ಗೆ ಹೈಕೋರ್ಟ್ ಗೆ ಮೆಟ್ಟಿಲೇರಿದ್ದಾರೆ.
ಇಷ್ಟೆಲ್ಲ ನಡೆದರೂ ಡಿ.ಕೆ. ಶಿವಕುಮಾರ್ ಮನೆಯತ್ತ ಯಾವ ಕಾಂಗ್ರೆಸ್ ನಾಯಕರೂ ತಲೆಹಾಕದಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ಕಾಂಗ್ರೆಸ್ ಹಿರಿಯ ನಾಯಕರೆಲ್ಲ ಡಿಕೆಶಿ ಮನೆಗೆ ಬಂದು ಆತ್ಮಸ್ಥೈರ್ಯ ತುಂಬಿದ್ದರು. ಆದರೆ, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚಾಗಿ ಡಿಕೆಶಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕುಟುಂಬಕ್ಕೇ ಹೆಚ್ಚು ಆಪ್ತರಾಗಿದ್ದು,ಇದರಿಂದ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಮೇಲೆ ಅಸಮಾಧಾನ ಉಂಟಾಗಿತ್ತು.
ಈ ಬಗ್ಗೆ ಸುದ್ದಿಗಾರರೊಂದಿದಗೆ ಮಾತನಾಡಿದ ಡಿಕೆಶಿ, ನಾನೇನೂ ತಪ್ಪು ಮಾಡಿಲ್ಲ, ರೇಪು ಮಾಡಿಲ್ಲ, ದುಡ್ಡು ಕದ್ದಿಲ್ಲ. ರಾಜಕೀಯವಾಗಿ ನಮ್ಮ ಪಕ್ಷದ ಶಾಸಕರನ್ನು ರಕ್ಷಣೆ ಮಾಡಲು ಎಷ್ಟು, ಜೊತೆಗೆ ಅವರನ್ನು ನಿಯಂತ್ರಣದಲ್ಲಿಡಲು ಸಾಕಷ್ಟು ಕೆಲಸ ಮಾಡಬೇಕಾಯಿತು. ಹೀಗಾಗಿ ಈಗ ಬೇಕಾದಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಪರವಾಗಿಲ್ಲ ಎಲ್ಲವನ್ನೂ ಎದುರಿಸುತ್ತೆನೆ ಎಂದರು. ಏನಾದರೂ, ಯಾರಿಗಾದರೂ ಒಳ್ಳೆಯದು ಮಾಡಲು ಹೊರಟಾಗ ಈ ರೀತಿ ಆಗುತ್ತದೆ. ಗುರುವಾರ ನಾವು ಹಾಕಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಸದ್ಯಕ್ಕೆ ನಾನು ಲಾಯರ್ ನ ಭೇಟಿ ಆಗಲು ದೆಹಲಿಗೆ ಹೋಗುತ್ತಿದ್ದೇನೆ ಎಂದರು.ಅದಕ್ಕೂ ಮೊದಲು ಪ್ರೆಸ್ ಮೀಟ್ ಮಾಡಿ ಮಾತಾಡೇ ದೆಹಲಿಗೆ ಹೋಗುತ್ತೇನೆ. ನನಗೆ ಒಂದೆರಡು ಗಂಟೆ ಪರ್ಸನಲ್ ಕಮಿಟ್ ಮೆಂಟ್ ಕೆಲಸ ಇದೆ. ಆದ್ದರಿಂದ ಹೋಗುತ್ತಿದ್ದೇನೆ. ನನ್ನ ಯಾರೂ ಫಾಲೋ ಮಾಡಬೇಡಿ ಎಂದು ಡಿಕೆಶಿ ಮನವಿ ಮಾಡಿಕೊಂಡರು.