ಬೆಂಗಳೂರು, ಆ.06(Daijiworld News/SS): ರಾಜಕೀಯ ಪಕ್ಷಗಳು ಕಾಶ್ಮೀರ ವಿಷಯವನ್ನು ವೋಟ್ ಬ್ಯಾಂಕ್ಗಾಗಿ ಬಳಸಿಕೊಂಡವು ಎಂದು ಹಿರಿಯ ಬಿಜೆಪಿ ನಾಯಕ ಎಸ್. ಎಂ ಕೃಷ್ಣ ಹೇಳಿದ್ದಾರೆ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರವನ್ನು ಹಿರಿಯ ಬಿಜೆಪಿ ನಾಯಕ ಎಸ್. ಎಂ ಕೃಷ್ಣ ಸ್ವಾಗತಿಸಿದ್ದಾರೆ. ಸಂವಿಧಾನದ 370ನೇ ವಿಧಿ ಮತ್ತು 35(ಎ) ಪರಿಚ್ಛೇದವನ್ನು ರದ್ದು ಮಾಡಿರುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹೊಸ ಇತಿಹಾಸ ಬರೆದಿದ್ದಾರೆ ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಕಾಶ್ಮೀರ ವಿಷಯವನ್ನು ವೋಟ್ ಬ್ಯಾಂಕ್'ಗಾಗಿ ಬಳಸಿಕೊಂಡವು. ವಿಧಾನಸಭೆ ರಚನೆಯಾಗುವವರೆಗೂ ಈ ವಿಶೇಷಾಧಿಕಾರವನ್ನು ತಾತ್ಕಾಲಿಕವಾಗಿರುವಂತೆ ನಿಯಮ ಮಾಡಲಾಗಿತ್ತು, ಆದರೆ ಪಟ್ಟಭದ್ರ ಹಿತಸಾಕ್ತಿಗಳಿಂದಾಗಿ ಈ ವಿಶೇಷಾಧಿಕಾರ ತಾತ್ಕಾಲಿಕವಾಗಿರುವುದರ ಬದಲಿಗೆ, ಶಾಶ್ವತವಾಗಿ ಮುಂದುವರಿಸಿಕೊಂಡು ಬರುವಂತಾಯಿತು ಎಂದು ಹೇಳಿದ್ದಾರೆ.
ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿಗಳಿಂದಾಗಿ ಬ್ಲಂಡರ್ ಅನ್ನು ಮೋದಿ ಸರ್ಕಾರ ಸರಿಪಡಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯಿಂದ ಒಂದು ರಾಷ್ಟ್ರ ಒಂದೇ ಜನ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.