ಮುಂಬೈ, ಏ.17 (DaijiworldNews/AK): ಮಹಾರಾಷ್ಟ್ರ ಸರ್ಕಾರವು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ. ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯಾಗಿ ಅನುಷ್ಠಾನ ಮಾಡುವುದು ಯೋಜನೆಯ ಪ್ರಮುಖ ಅಂಶವಾಗಿದೆ.

2025-26ನೇ ಶೈಕ್ಷಣಿಕ ವರ್ಷದಿಂದ ಎನ್ಇಪಿ ಜಾರಿಯಾಗಿದೆ. ಮರಾಠಿ ಮತ್ತು ಇಂಗ್ಲಿಷ್ ಬಳಿಕ 3ನೇ ಕಡ್ಡಾಯ ಭಾಷೆಯಾಗಿದೆ. 1ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸುತ್ತದೆ.
ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದೆ. ಮಹಾರಾಷ್ಟ್ರ ಸರ್ಕಾರವು 2025-26ರ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ಜಾರಿಗೆ ತರಲು ವಿವರವಾದ ಯೋಜನೆಯನ್ನು ಘೋಷಿಸಿದೆ.
ಈ ಯೋಜನೆಯ ಪ್ರಮುಖ ಅಂಶವೆಂದರೆ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗಿದೆ.