ನವದೆಹಲಿ, ಮಾ.27 (DaijiworldNews/AK):ಅಮೆರಿಕ ಸರ್ಕಾರದಿಂದ ವೀಸಾ ಕೊಡಿಸುವ ಭಾರತೀಯ ಏಜೆಂಟ್ಗಳು ಅಥವಾ ಮದ್ಯವರ್ತಿಗಳು ವಿವಿಧ ಸಾಫ್ಟ್ ವೇರ್ ಗಳನ್ನು ಬಳಸಿ ನಿಗದಿಗೊಳಿಸಿದ್ದ ವೀಸಾ ಇಂಟರ್ ವ್ಯೂ ಅಪಾಯಿಂಟ್ ಮೆಂಟ್ ಗಳನ್ನು ಟ್ರಂಪ್ ಸರ್ಕಾರ ಏಕಾಏಕಿ ರದ್ದುಗೊಳಿಸಿದೆ. ಸುಮಾರು 2,000 ವೀಸಾ ಅಪಾಯಿಂಟ್ ಮೆಂಟ್ ಗಳನ್ನು ರದ್ದುಗೊಂಡಿವೆ.

ಇದು ಅಮೆರಿಕಕ್ಕೆ ಹೋಗಲಿರುವ ಭಾರತೀಯರಿಗೆ ದುಬಾರಿಯಾಗಿ ಪರಿಣಿಮಿಸಿದ್ದು, ಮತ್ತೆ ಸಂದರ್ಶನಕ್ಕಾಗಿ ಏಜೆಂಟರಿಗೆ ವೀಸಾ ಸಂದರ್ಶನಕ್ಕಾಗಿ 30ರಿಂದ 35 ಸಾವಿರ ರೂ.ಗಳನ್ನು ತೆರಬೇಕಾದ ಅನಿವಾರ್ಯತೆ ಎದುರಾಗಿದೆ.ಒಂದು ಕುಟುಂಬದಿಂದ ಇಬ್ಬರು ಅಥವಾ ಮೂವರು ಅಮೆರಿಕ ವೀಸಾಕ್ಕಾಗಿ ಎದುರು ನೋಡುತ್ತಿದ್ದರೂ ಅವರಿಗೆ ಸಂದರ್ಶನದ ದಿನಾಂಕ ನಿಗದಿ ಮಾಡಿಕೊಡಲು ಕನಿಷ್ಟ 90 ಸಾವಿರ ರೂ. ನೀಡಬೇಕಾಗುತ್ತದೆ.
ಈ ಕುರಿತಂತೆ ಭಾರತದಲ್ಲಿರುವ ಅಮೆರಿಕದ ರಾಜತಾಂತ್ರಿಕ ಕಚೇರಿ ಪ್ರಕಟಣೆ ನೀಡಿದ್ದು, ಭಾರತೀಯ ಧೂತಾವಾಸದ ಪರವಾಗಿ ಕೆಲವು ಏಜೆಂಟ್ ಗಳು ಹಾಗೂ ದಲ್ಲಾಳಿಗಳು ನಿಗದಿಪಡಿಸಿದ್ದ ಅಮೆರಿಕ ವೀಸಾ ಸಂದರ್ಶನ ನಿಗದಿಗಳನ್ನು ರದ್ದುಗೊಳಿಸಲಾಗಿದೆ. ಹೀಗೆ, ದಲ್ಲಾಳಿಗಳು, ಏಜೆಂಟ್ ಗಳು ನಾನಾ ಆ್ಯಪ್ ಗಳು, ಸಾಫ್ಟ್ ವೇರ್ ಗಳನ್ನು ಉಪಯೋಗಿಸಿ ಸಂದರ್ಶನಗಳನ್ನು ನಿಗದಿಪಡಿಸಿ ಅನಧಿಕೃತ ವ್ಯಕ್ತಿಗಳನ್ನು ಅಮೆರಿಕ್ಕೆ ಕಳುಹಿಸುವಂಥ ತಂತ್ರಗಾರಿಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಅಮೆರಿಕ ಸರ್ಕಾರ ಮುಂದಾಗಿದೆ. ಅದೇ ಕಾರಣಕ್ಕೆ ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದೆ.