ಭೋಪಾಲ್, ಮಾ. 01(DaijiworldNews/TA): ಮಧ್ಯಪ್ರದೇಶದ ಗೋವಿಂದಪುರದಲ್ಲಿರುವ ಬಣ್ಣ ತಯಾರಿಸುವ ರಾಸಾಯನಿಕ ಕಾರ್ಖಾನೆಯಲ್ಲಿ ಶನಿವಾರ ಬೆಂಕಿ ಅವಘಡ ಸಂಭವಿಸಿದೆ. ಜೆಕೆ ರಸ್ತೆಯಲ್ಲಿರುವ ಟಾಟಾ ಮಹೀಂದ್ರಾ ಶೋ ರೂಂ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ರಕ್ಷಣಾ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಶ್ರಮಿಸಿದ್ದಾರೆ.

ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. 20 ಅಡಿ ಎತ್ತರದವರೆಗೆ ಬೆಂಕಿ ಜ್ವಾಲೆ ಕಾರ್ಖಾನೆಯನ್ನು ಆವರಿಸಿದ್ದು, ಹಲವಾರು ಕಿಲೋಮೀಟರ್ ದೂರದಿಂದಲೂ ಹೊಗೆ ಗೋಚರಿಸುತ್ತಿತ್ತು.
ಕಾರ್ಖಾನೆ ಆವರಣದಲ್ಲಿ ದೊಡ್ಡ ಸಿಲಿಂಡರ್ ಸ್ಫೋಟಗೊಂಡಿದ್ದು, ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿ, ಆತಂಕ ಮೂಡಿಸಿದೆ. ತುರ್ತು ಪರಿಸ್ಥಿತಿಗೆ ಸ್ಪಂದಿಸಿ, ಗೋವಿಂದಪುರ, ಪುಲ್ ಬೋಗ್ಡಾ ಮತ್ತು ಫತೇಘರ್ ಅಗ್ನಿಶಾಮಕ ಠಾಣೆಗಳಿಂದ 10 ರಿಂದ 12 ಅಗ್ನಿಶಾಮಕ ದಳದ ವಾಹನಗಳೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದರು.