ಲಕ್ನೋ, ಫೆ.26 (DaijiworldNews/AA): ಯುಪಿಎಸ್ಸಿ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಪಡೆದು ಡಿಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಿಯಾಂಕಾ ಬಾಜ್ಪೈ ಅವರು ತನ್ನ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ತುಂಬಾ ಹೆಸರುವಾಸಿಯಾದವರು. ಇವರ ಪ್ರಯಾಣ ಯುಪಿಎಸ್ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿ ನೀಡಲಿದೆ. 
ಪ್ರಿಯಾಂಕಾ ಮೂಲತಃ ಲಕ್ನೋ ನಿವಾಸಿಯಾಗಿದ್ದು, ಲಕ್ನೋ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಜೊತೆಗೆ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನೂ ಪಡೆದಿಯುವುದರೊಂದಿಗೆ ಪಿಎಚ್ಡಿ ಕೂಡ ಮಾಡಿದ್ದಾರೆ.
ಯುಪಿಎಸ್ಸಿ ಪರೀಕ್ಷೆಗೆ ಪ್ರಿಯಾಂಕಾ ಅವರು ತಯಾರಿ ನಡೆಸುವ ಸಮಯದಲ್ಲಿ 2 ವರ್ಷಗಳ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು. 2016 ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಅಬಕಾರಿ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡರು. ನಂತರ ಎರಡನೇ ಬಾರಿ ಯುಸಿಎಸ್ಸಿ ಪರೀಕ್ಷೆ ಬರೆದ ಅವರು ಅದರಲ್ಲಿ ಆರನೇ ರ್ಯಾಂಕ್ ಪಡೆಯುತ್ತಾರೆ. ಈ ಮೂಲಕ ಅವರು ಡಿಎಸ್ಪಿ ಹುದ್ದೆಗೆ ಆಯ್ಕೆಯಾಗುತ್ತಾರೆ.
ಡಿಎಸ್ಪಿ ಪ್ರಿಯಾಂಕಾ ಬಾಜ್ಪೈ ಅವರು ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಯುಪಿಪಿಸಿಎಸ್ ಯ 2017ರ ಬ್ಯಾಚ್ನ ಟಾಪರ್ಗಳಲ್ಲಿ ಒಬ್ಬರಾಗಿದ್ದಾರೆ. ಪ್ರಿಯಾಂಕಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಪ್ರಸ್ತುತ ಕನ್ನೌಜ್ನಲ್ಲಿ ಡಿಎಸ್ಪಿಯಾಗಿ ನೇಮಕಗೊಂಡಿರುವ ಪ್ರಿಯಾಂಕ ಖಡಕ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ.