ಬೆಂಗಳೂರು,ಫೆ.13(DaijiworldNews/TA): ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಸಿದ್ದರಾಮಯ್ಯನವರು ರಾಜ್ಯದ ದೀರ್ಘಾವಧಿಯ ಸಿಎಂ ಆಗಿ ದಾಖಲೆ ಮಾಡಲಿ ಎಂದು ಹಾರೈಸ್ತೇನೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ 5 ವರ್ಷದ ಆಡಳಿತವನ್ನು ಪೂರ್ಣಗೊಳಿಸಿದರೆ ಅದು ಸಹಜವಾಗಿ ದಾಖಲೆ ಆಗುವುದು ಎಂದರು.

ಸಿಎಲ್ಪಿ ನಾಯಕರಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದಾಗ ನಮಗೆ ಹೈಕಮಾಂಡ್ ನವ್ರು ಎರಡೂವರೆ ವರ್ಷ ಅಧಿಕಾರ ಅಂತೇನೂ ಹೇಳಿರಲಿಲ್ಲ. ಹಾಗಾಗಿ ನಾವೆಲ್ಲ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರೆ ಅಂತನೇ ಭಾವಿಸಿದ್ದೇವೆ ಅಂತ ಇದೇವೇಳೆ ಪರಮೇಶ್ವರ್ ಸ್ಪಷ್ಟನೆ ನೀಡಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಮಲ್ಲಿಕಾರ್ಜುನ ಖರ್ಗೆ ಸುಳಿವು ಕೊಟ್ಟಿರುವ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದ ಪರಮೇಶ್ವರ್, ಹೈಕಮಾಂಡ್ ತೀರ್ಮಾನ ಏನೇ ಇದ್ರೂ ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು.