ಬೆಂಗಳೂರು, ಫೆ.08(DaijiworldNews/TA): ಯುವ ಕಾಂಗ್ರೆಸ್ ಚುನಾವಣೆಯ ಫಲಿತಾಂಶವು ಹೊರಬಂದಿದ್ದು, ಮಂಜುನಾಥ್ ಹೆಚ್ಎಸ್ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಂಜುನಾಥ್ ಮತ್ತು ದೀಪಿಕಾ ರೆಡ್ಡಿ ನಡುವೆ ನಡೆದ ಕಠಿಣ ಪೈಪೋಟಿಯಲ್ಲಿ, ಮಂಜುನಾಥ್ 2,71,638 ಮತಗಳಿಂದ ಜಯಪ್ರದವಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.
ಮಂಜುನಾಥ್ ಅವರು 5,67,343 ಮತಗಳನ್ನು ಗಳಿಸಿದರೆ, ದೀಪಿಕಾ ರೆಡ್ಡಿ 2,95,705 ಮತಗಳನ್ನು ಪಡೆದಿದ್ದಾರೆ. ಮಂಜುನಾಥ್ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಬೆಂಬಲಿಗರಾಗಿದ್ದು, ತಮ್ಮ ಜಯವನ್ನು ಅವರೊಂದಿಗೆ ಹಂಚಿಕೊಂಡಿದ್ದಾರೆ.