ಮಹಾರಾಷ್ಟ, ನ.20(DaijiworldNews/TA):ಮಹಾರಾಷ್ಟ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳು ಮತ್ತು ಜಾರ್ಖಂಡ್ನಲ್ಲಿ 2ನೇ ಮತ್ತು ಅಂತಿಮ ಹಂತದಲ್ಲಿ 38 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಮಹಾ ವಿಕಾಸ್ ಅಘಾಡಿ-ಮಹಾಯುತಿ ಮೈತ್ರಿಕೂಟಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಕೋಪ್ರಿ-ಪಚ್ಪಖಾಡಿಯಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿದಂತೆ ಪ್ರಮುಖ ನಾಯಕರು ನಾಗಪುರ ನೈಋತ್ಯದಲ್ಲಿ ತಮ್ಮ ಭದ್ರಕೋಟೆಯನ್ನು ಸಮರ್ಥಿಸಿಕೊಂಡಿದ್ದಾರೆ. ಎನ್ಸಿಪಿ ನಾಯಕ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿ ಕುಟುಂಬದ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಜಾರ್ಖಂಡ್ನಲ್ಲಿ 55 ಮಹಿಳೆಯರು, ಒಬ್ಬರು ತೃತೀಯಲಿಂಗಿ ಅಭ್ಯರ್ಥಿ ಮತ್ತು 472 ಪುರುಷರು ಸೇರಿದಂತೆ 528 ಅಭ್ಯರ್ಥಿಗಳು ಈ ಹಂತದಲ್ಲಿ 38 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. 61 ಲಕ್ಷ ಮಹಿಳೆಯರು ಸೇರಿದಂತೆ 1.23 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಲಾಗಿದೆ. ಷೇರುಪೇಟೆ, ಬ್ಯಾಂಕ್, ಶಾಲೆ-ಕಾಲೇಜು, ಕಚೇರಿಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ.