ಮುಂಬೈ, ನ.17(DaijiworldNews/AA): ಭಾರತೀಯ ರಿಸರ್ವ್ ಬ್ಯಾಂಕ್ ನ ಗ್ರಾಹಕ ಸೇವಾ ಸಂಖ್ಯೆಗೆ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದಾತ ತಾನು ಲಷ್ಕರ್-ಎ-ತೊಯ್ಬಾದ ಸಿಇಒ ಎಂದು ಹೇಳಿಕೊಂಡಿದ್ದಾನೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಗ್ರಾಹಕ ಸೇವಾ ಸಂಖ್ಯೆಗೆ ಬೆದರಿಕೆ ಕರೆ ಬಂದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರಿಸರ್ವ್ ಬ್ಯಾಂಕ್ ನ ಭದ್ರತಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮುಂಬೈನಲ್ಲಿರುವ ಜೆಎಸ್ಎ ಕಾನೂನು ಸಂಸ್ಥೆ ಬಲ್ಲಾರ್ಡ್ ಪೇರ್ ಮತ್ತು ಜೆಎಸ್ಎ ಕಚೇರಿ ಕಮಲಾ ಮಿಲ್ ಲೋವರ್ ಪರ್ಲ್ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಈ ಬೆದರಿಕೆ ಮೇಲ್ ಕಂಪನಿಯ ಇಮೇಲ್ ಐಡಿಯು ಫರ್ಜಾನ್ ಅಹ್ಮದ್ ಎಂಬುದಾಗಿದೆ.
ಇನ್ನು ಜೆಎಫ್ಎ ಸಂಸ್ಥೆಯ ಕಚೇರಿಗಳು ಮತ್ತು ಬಲ್ಲಾರ್ಡ್ ಎಸ್ಟೇಟ್ನ ಕಚೇರಿಗಳಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಮೇಲ್ ಕಳುಹಿಸಲಾಗಿದೆ. ಈ ಮಾಹಿತಿ ಬಂದ ಕೂಡಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.