ರಾಜಸ್ಥಾನ, ನ.14(DaijiworldNews/AK): ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ದೇಶದ ಕೋಟ್ಯಂತರ ಯುವಕರ ಕನಸಾಗಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಹೆಚ್ಚಿನ ವಿದ್ಯಾರ್ಥಿಗಳು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವ ಮೂಲಕ ದೇಶಕ್ಕೆ ಸೇವೆ ಸಲ್ಲಿಸಲು ಬಯಸುತ್ತಾರೆ. ಅಂತಹ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ವಿದುಷಿ ಸಿಂಗ್ ರಾಜಸ್ಥಾನದ ಜೋಧಪುರದಲ್ಲಿ ಜನಿಸಿದರು. 21ನೇ ವಯಸ್ಸಿನಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ವಿದುಷಿ ಸಿಂಗ್ ಅವರಿಗೂ ಅಯೋಧ್ಯೆಯ ನಂಟಿದೆ. ಅವರ ಕುಟುಂಬ ಅಯೋಧ್ಯೆಯ ಮೂಲದ್ದಾಗಿದೆ. ಕೇವಲ 21 ನೇ ವಯಸ್ಸಿನಲ್ಲಿ, ಅವರು ಯಾವುದೇ ಕೋಚಿಂಗ್ ಇಲ್ಲದೆ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ದೆಹಲಿ ವಿಶ್ವವಿದ್ಯಾನಿಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಬಿಎ ಆನರ್ಸ್ (ಅರ್ಥಶಾಸ್ತ್ರ) ಪದವಿಯನ್ನು ಪಡೆದ ನಂತರ ಭಾರತೀಯ ವಿದೇಶಾಂಗ ಸೇವೆಯಲ್ಲಿ ಅಧಿಕಾರಿಯಾಗಬೇಕೆಂಬುದು ಅವರ ಅಜ್ಜಿ ಕನಸಾಗಿತ್ತು. ಅವರು UPSC 2022 ರಲ್ಲಿ 13 ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆಗೈದಿದ್ದಾರೆ.
ವಿದುಷಿ ಸಿಂಗ್ ಕೇವಲ 21 ವರ್ಷ ವಯಸ್ಸಿನಲ್ಲಿ 13 ನೇ ರ್ಯಾಂಕ್ನೊಂದಿಗೆ ಪರೀಕ್ಷೆಯನ್ನು ತೇರ್ಗಡೆಯಾದರು. ಅವರು ಅರ್ಥಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡರು. ವಿದುಷಿ ಭಾರತೀಯ ವಿದೇಶಾಂಗ ಸೇವೆಯಲ್ಲಿ ಸರ್ಕಾರಿ ಅಧಿಕಾರಿಯಾಗಲು ಆಯ್ಕೆ ಮಾಡಿಕೊಂಡರು.