ಬೆಂಗಳೂರು,ನ.07(DaijiworldNews/TA) :ಕುಡಿದ ಮತ್ತಲ್ಲಿ ಡಾಕ್ಟರ್ ಅವಾಂತರವೊಂದು ಮಾಡಿ ಸುದ್ದಿಯಾಗಿದ್ದಾರೆ. ವೈದ್ಯರು ಹಾಗು ನರ್ಸ್ ಸೇರಿ ಆಸ್ಪತ್ರೆಗೆ ಬಂದಿದ್ದ ಯುವತಿಗೆ ನಾಲ್ಕೈದು ಇಂಜೆಕ್ಷನ್ ಕೊಟ್ಟ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಯುವತಿಯೊಬ್ಬಳು ತೀವ್ರ ಜ್ವರದಿಂದ ಆಸ್ಪತ್ರೆಗೆ ಹೋಗಿದ್ದಳು ಎನ್ನಲಾಗಿದೆ. ಈ ವೇಳೆ ಡಾ.ಪ್ರದೀಪ್ ಹಾಗೂ ನರ್ಸ್ ಮಹೇಂದ್ರ ಕುಡಿದ ನಶೆಯಲ್ಲಿದ್ದರು. ಈ ವೇಳೆ ಯುವತಿಗೆ ಮಹೇಂದ್ರ ಇಂಜೆಕ್ಷನ್ ನೀಡಿದ್ದಾನೆ ಎಂದು ಹೇಳಲಾಗಿದೆ.
ನಂತರ ಡಾ.ಪ್ರದೀಪ್ನನ್ನು ಕರೆದು ಚಿಕಿತ್ಸೆ ಕೊಡುವಂತೆ ಹೇಳಿದ್ದಾನೆ. ಡಾ.ಪ್ರದೀಪ್ ಇಂಜೆಕ್ಷನ್ ಹಿಡಿದು ಯುವತಿಯ ಮೈಕೈಗೆ 4-5 ಬಾರಿ ಇಂಜೆಕ್ಷನ್ ಚುಚ್ಚಿದ್ದಾನೆ. ಹಾಗು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವತಿ ದೂರಿದ್ದಾಳೆ. ಈ ವೇಳೆ ಯುವತಿಯ ಪೋಷಕರು ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ತಕ್ಷಣ ವೈದ್ಯ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.