ನವದೆಹಲಿ, ನ.06(DaijiworldNews/TA):ಐಎಎಸ್ ಅಧಿಕಾರಿಯಾಗುವುದು ಭಾರತದ ಲಕ್ಷಾಂತರ ಯುವಕರ ಕನಸು. ಪ್ರತಿ ವರ್ಷವೂ ಲಕ್ಷಾಂತರ ಯುವಕರು UPSC ಪರೀಕ್ಷೆ ಬರೆಯುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಯುವಕರು ಹಗಲಿರುಳು ಶ್ರಮಿಸುತ್ತಾರೆ. ಕನಸು ನನಸಾಗಿಸಲು ಹಗಲಿರುಳು ಶ್ರಮಿಸಿ ಜಯಶಾಲಿಯಾಗುತ್ತಾರೆ. ಇಂತಹವರಲ್ಲಿ ಐಎಎಸ್ ಕೆ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಎಷ್ಟೇ ಕಷ್ಟ, ವೈಫಲ್ಯಗಳ ನಡುವೆಯೂ ಉತ್ತೀರ್ಣರಾದ ಜೈಗಣೇಶ್ ಕೂಡಾ ಒಬ್ಬರು.
ಜೈಗಣೇಶ್ ಉತ್ತರ ತಮಿಳುನಾಡಿನ ಅಂಬರ್ ಬಳಿಯ ಸಣ್ಣ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ಅವರು ತನ್ನ ಹಳ್ಳಿಯ ಶಾಲೆಯಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪಡೆದರು. ಮತ್ತು ತನ್ನ 10 ನೇ ಮತ್ತು 12 ನೇ ಪರೀಕ್ಷೆಯ ನಂತರ ಅವರು ಉದ್ಯೋಗ ಪಡೆಯುವ ಭರವಸೆಯಲ್ಲಿ ಪಾಲಿಟೆಕ್ನಿಕ್ ಕಾಲೇಜಿಗೆ ಸೇರಿದರು.
ನಂತರ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಅನ್ನು ಮುಂದುವರಿಸಲು ಥಂಥಿ ಪೆರಿಯಾರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಹೋದರು. ಓದು ಮುಗಿದ ನಂತರ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತು, ಅಲ್ಲಿ ಮಾಸಿಕ 2,500 ರೂ ಗೆ ಉದ್ಯೋಗ ಮಾಡಬೇಕಾದ ಪರಿಸ್ಥಿತಿ ಎದುರಾಯಿತು.
ಬಿ.ಟೆಕ್ ನಂತರ ಕೆಲಕಾಲ ಕೆಲಸ ಮಾಡಿದರು. ಆದರೆ ಶೀಘ್ರದಲ್ಲೇ ಅವರು ಐಎಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ತನ್ನ ಕನಸನ್ನು ನನಸಾಗಿಸಲು ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದ ಆತ ಆರು ಬಾರಿ ಫೇಲ್ ಆಗಿ ತದನಂತರ ಜಯಶಾಲಿಯಾದರು. ಸಂಪೂರ್ಣ ಸಿದ್ಧತೆಯೊಂದಿಗೆ ಏಳನೇ ಪ್ರಯತ್ನ ನಡೆಸಿದ ಅವರು ಈ ಬಾರಿ ಅಂತಿಮವಾಗಿ 156 ರ್ಯಾಂಕ್ ಪಡೆಯುವ ಮೂಲಕ ಯಶಸ್ಸು ಸಾಧಿಸಿದರು.