ಬೆಂಗಳೂರು,ಅ.24(DaijiworldNews/TA):ಬೆಂಗಳೂರಿನಲ್ಲಿ ಕಟ್ಟಡ ದುರಂತವಾಗಿ ಸಾವಿನ ಸಂಖ್ಯೆ ಆರಕ್ಕೇರಿದ್ದು ಕೇಂದ್ರ ಹಾಗು ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ಸಚಿವ ಬೈರತಿ ಸುರೇಶ್ ಕೂಡ ಸಿಎಂಗೆ ಸಾಥ್ ನೀಡಿದ್ದಾರೆ. ಅನುಮತಿ ಪಡೆಯದೆ ಕಟ್ಟುತ್ತಿರುವ ಕಟ್ಟಡವನ್ನ ಕೂಡಲೇ ನಿಲ್ಲಿಸಲು ಸಿಎಂ ಸೂಚನೆಯನ್ನು ನೀಡಿದ್ದಾರೆ. ಮೃತರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ತಲಾ 2 ಲಕ್ಷ ರೂ. ಹಾಗೂ ಪಾಲಿಕೆಯಿಂದ ಮೂರು ತಲಾ ಲಕ್ಷ ರೂ. ಪರಿಹಾರ ಕೂಡಲೇ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ, ನಾನು ನಿನ್ನೆ ಇರಲಿಲ್ಲ, ವಯನಾಡಿಗೆ ಹೋಗಿದ್ದೆ. ಗಾಯಗೊಂಡಿರುವವರಿಗೆ ಸರ್ಕಾರ ಆಸ್ಪತ್ರೆಯ ಖರ್ಚು ಭರಿಸುತ್ತದೆ. ಮೃತರ ಶವಗಳನ್ನು ಕಳಿಸಿಕೊಡುವ ಕೆಲಸ ಕೂಡ ಮಾಡಲಾಗುತ್ತದೆ ಎಂಬುವುದಾಗಿ ಹೇಳಿದರು.